ಬೆಂಗಳೂರು –
ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಿಕ್ಷಕರ ನೇಮ ಕಾತಿ ಬಗ್ಗೆ ಚರ್ಚೆ ನಡೆದಿದೆ.ಸುರಪುರ ಶಾಸಕ ರಾಜುಗೌಡ ಈ ಪ್ರಶ್ನೆಯನ್ನು ಎತ್ತಿದ್ದಾರೆ.
ರಾಜ್ಯದಲ್ಲಿ 45,565 ಹುದ್ದೆಗಳು ಖಾಲಿ ಇದೆ ಎಂದು ರಾಜು ಗೌಡ ಮಾಹಿತಿ ನೀಡಿದ್ದಾರೆ.ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ 18,477 ಹುದ್ದೆ ಖಾಲಿ ಇದೆ.ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಿ ಎಂದು ಶಾಸಕ ರಾಜುಗೌಡ ಪಟ್ಟು ಹಿಡಿದಿದ್ದು ಕಂಡು ಬಂದಿತು
ಇದೇ ವೇಳೆ ಶಾಸಕ ರಾಜುಗೌಡ ಪ್ರಶ್ನೆಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಉತ್ತರ ನೀಡಿದ್ದಾರೆ.ಶಿಕ್ಷಕರ ಕೊರತೆ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿರುವುದು ಸತ್ಯ.ಕಲ್ಯಾಣ ಕರ್ನಾಟ ಕದಲ್ಲಿ 5 ಸಾವಿರ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ.3-4 ಸಾವಿರ ನೇಮಕವಾಗಬಹುದು ಎಂದು ಅಂದಾಜಿಸಲಾ ಗಿದೆ.
ಇದು ಸಾಧ್ಯವಾಗದೆ ಇದ್ರೆ ನವೆಂಬರ್ 6ಕ್ಕೆ ಟಿಇಟಿ ಮಾಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.ಜನವರಿ ಅಥವಾ ಫೆಬ್ರವರಿ ವೇಳೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.ಅಲ್ಲಿಯವರೆಗೂ ಅತಿಥಿ ಶಿಕ್ಷಕರನ್ನೇ ಮುಂದುವರೆಸುತ್ತೇವೆ ಎಂದರು.