This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

Sports News

ತಪ್ಪಿತಸ್ಥ ಸರ್ಕಾರಿ ನೌಕರರಿಗೆ ದೊಡ್ಡ ಶಾಕ್ ನೀಡಿದ ರಾಜ್ಯ ಸರ್ಕಾರ – ನಿವೃತ್ತಿ ಯ ಮೊದಲೇ ತಪ್ಪಿತಸ್ಥ ನೌಕರರ ಮೇಲೆ ಆಗಲಿದೆ ಶಿಸ್ತು ಕ್ರಮ…..


ಬೆಂಗಳೂರು –

ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ತೋರಿದ ದುರ್ನಡತೆ ಆರೋಪಕ್ಕೆ ಸಂಬಂಧಿಸಿ ವಯೋನಿವೃತ್ತಿ ಹೊಂದುವವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿವೃತ್ತಿಗೂ ಮೊದಲೇ ತಪ್ಪಿತಸ್ಥ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸರ್ಕಾರಿ ನೌಕರ ಸೇವೆಯಲ್ಲಿರುವಾಗ ಎಸಗಿದದುರ್ನಡತೆಗೆ ಸಂಬಂಧಿಸಿ ಆತ ನಿವೃತ್ತಿ ಹೊಂದುವವರೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ.ಅಥವಾ ನಿವೃತ್ತಿಯ ನಿಕಟಪೂರ್ವದ ಕೆಲವೇ ದಿನಗಳಲ್ಲಿ ಶಿಸ್ತು ಕ್ರಮ ಆರಂಭಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.ಇದರಿಂದ ತಪ್ಪಿತಸ್ಥ ಸರ್ಕಾರಿ ನೌಕರನ ವಿರುದ್ಧ ಪರಿಣಾಮಕಾರಿ ಯಾಗಿ ಶಿಸ್ತು ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಹೀಗಾಗಿ ನೌಕರನು ಶಿಸ್ತು ಕ್ರಮದಿಂದ ರಕ್ಷಿಸಲ್ಪಡುತ್ತಿದ್ದು ಇದು ಸರ್ಕಾರದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾವುದೇ ಸರ್ಕಾರಿ ನೌಕರ ಎಸಗಿದ ದುರ್ನಡತೆಯು ಕೂಡಲೇ ಶಿಸ್ತು ಪ್ರಾಧಿಕಾರಿಗಳ ಗಮನಕ್ಕೆ ಬಂದು ಆತ ನಿವೃತ್ತಿ ಅಂಚಿನಲ್ಲಿದ್ದರೆ ಸಂಬಂಧಪಟ್ಟ ಶಿಸ್ತು ಪ್ರಾಧಿಕಾರ ಗಳು ಅನಗತ್ಯ ವಿಳಂಬ ಮಾಡದೆ ಅಂಥ ನೌಕರನ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು.ಕಾಲಮಿತಿ ಮೀರಿದ ಪ್ರಕರಣಗಳಲ್ಲಿನ ವಿಳಂಬಕ್ಕೆ ಕಾರಣರಾದ ಜವಾಬ್ದಾರಿ ಅಧಿಕಾರಿ ಇಲ್ಲವೇ ನೌಕರರನ್ನು ಗುರುತಿಸಿ ಅವರ ವಿರುದ್ಧ ವೂ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಸಹ ಸೂಚಿಸಲಾ ಗಿದೆ.ದುರ್ನಡೆ ತೋರುವ ನೌಕರರ ಮೇಲೆ ನಿವೃತ್ತಿಗೂ ಮೊದಲೇ ಶಿಸ್ತು ಕ್ರಮ ಆಗಬೇಕು.ತಪ್ಪು ಮಾಡಿಯೂ ಶಿಸ್ತು ಕ್ರಮದಿಂದ ನೌಕರರು ತಪ್ಪಿಸಿಕೊಂಡರೆ ಅದು ಇತರ ನೌಕರರ ಜತೆಗೆ ಸರ್ಕಾರದ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇದೆ.

ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಅವರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆಗಾಗಿ ಸೂಕ್ತ ಸಮಯದಲ್ಲಿ ಅಂದರೆ ಅಂಥ ನೌಕರ ಸೇವೆಯಿಂದ ನಿವೃತ್ತಿ ಹೊಂದುವ ಸಾಕಷ್ಟು ಪೂರ್ವದಲ್ಲಿಯೇ ಶಿಸ್ತುಕ್ರಮ ಆರಂಭಿಸಬೇಕು.ಇಲ್ಲದಿದ್ದರೆ ನಿವೃತ್ತಿ ನಂತರ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಗಳು 1957ರಡಿಯಲ್ಲಿ ಕೈಗೊಳ್ಳಲು ಅವಕಾಶವಿಲ್ಲ.ಆದರೆ ಅಂಥ ಶಿಸ್ತು ಕ್ರಮಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 214ರ ಅಡಿ ಮಾತ್ರಕೈಗೊಳ್ಳಲು ಅವಕಾಶವಿದೆ.ಆದರೆ ಸರ್ಕಾರಿ ನೌಕರನು ನಿವೃತ್ತಿಯಾದ ಬಳಿಕ ಅವನ ಮೇಲೆ ಹೂಡಲಾಗಿದ್ದ ಇಲಾಖಾ ವಿಚಾರಣೆ ಗಳಲ್ಲಿ ಸರ್ಕಾರಕ್ಕೆ ಆತನಿಂದ ಆರ್ಥಿಕ ಹಾನಿಯಾಗಿಲ್ಲ ಎಂಬ ಕಾರಣದ ಮೇಲೆ ಹಿಂದಕ್ಕೆ ಪಡೆಯುವ ಪ್ರಸ್ತಾವನೆ ಗಳೇ ಹೆಚ್ಚಾಗಿ ಸರ್ಕಾರಕ್ಕೆ ಬರುತ್ತಿವೆ.ಇದು ಸರಿಯಲ್ಲ ಅಲ್ಲದೇ ಸರ್ಕಾರಿ ನೌಕರ ನಿವೃತ್ತಿ ಹೊಂದುವ ಕೆಲವೇ ದಿನಗಳ ಮೊದಲು ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿರುವುದು ಸಹ ಸರಿಯಲ್ಲ ಎಂದು ಆದೇಶ ದಲ್ಲಿ ತಿಳಿಸಲಾಗಿದೆ.ಕೆಲವು ಸಂದರ್ಭದಲ್ಲಿ ದುರ್ನಡತೆಯು ಸರ್ಕಾರಿ ನೌಕರ ನಿವೃತ್ತಿ ಹೊಂದಿದ ನಾಲ್ಕು ವರ್ಷಕ್ಕೂ ಹಿಂದಿನ ಅವಧಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕಾಗಿ ಆತನ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 214 (ಬಿ)ಅಡಿಯಲ್ಲಿಯೂ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬ ನಿಲುವಿಗೆ ಬರಲಾಗುತ್ತಿದೆ.ಆದ್ದರಿಂದ ಸರ್ಕಾರಿ ನೌಕರರ ದುರ್ನಡತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿನ ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಂಬಂಧಿಸಿದ ನೌಕರ ವಯೋನಿವೃತ್ತಿ ಹೊಂದುವ ಕನಿಷ್ಟ 30 ದಿನಗಳ ಮೊದಲೇ ಕರಡು ದೋಷಾರೋಪಣೆ ಪಟ್ಟಿ ಮತ್ತು ಇನ್ನಿತರ ಪೂರಕ ದಾಖಲೆ ಪತ್ರಗಳನ್ನು ಶಿಸ್ತು ಪ್ರಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಸಕಾಲದಲ್ಲಿ ಇಲಾಖೆ ವಿಚಾರಣೆ ಆರಂಭಿಸಿ ದೋಷಾರೋಪಣೆ ಪಟ್ಟಿ ಮತ್ತು ಇನ್ನಿತರ ಪೂರಕ ದಾಖಲೆ ಪತ್ರಗಳನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸ ಬೇಕು.ಶಿಸ್ತು ಪ್ರಾಧಿಕಾರಿಗಳು ನಿವೃತ್ತಿ ಅಂಚಿನಲ್ಲಿರುವವರ ಪ್ರಕರಣಗಳನ್ನು ಶೀಘ್ರ ವಿಚಾರಣೆ ಮಾಡಿ ಶಿಸ್ತು ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.


Google News Join The Telegram Join The WhatsApp

 

 

Suddi Sante Desk

Leave a Reply