ಬೆಂಗಳೂರು –
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ,ವಿಡಿಯೋ ತೆಗೆಯುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ನಿನ್ನೆ ಅಷ್ಟೇ ಆದೇಶವನ್ನು ಹೊರಡಿಸಿತ್ತು ಈ ಒಂದು ಆದೇಶ ಹೋರ ಬೀಳುತ್ತಿದ್ದಂತೆ ರಾಜ್ಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಆಕ್ರೋಶ ಅಸಮಾಧಾನ ಕಂಡು ಬಂದಿತು ಇದನ್ನು ಅರಿತ ರಾಜ್ಯ ಸರ್ಕಾರ ರಾತ್ರೋ ರಾತ್ರಿ ತಾನೇ ಮಾಡಿದ ಆದೇಶವನ್ನು ಹಿಂದೆ ಪಡೆದಿದೆ
ಹೌದು ರಾಜ್ಯ ಸರ್ಕಾರ ಎಚ್ಚೇತ್ತುಕೊಂಡು ತಾನೇ ಮಾಡಿದ ಈ ಒಂದು ಆದೇಶವನ್ನು ಹಿಂದೆ ಪಡೆದಿದ್ದು ವಿವಾದಕ್ಕೆ ತೆರೆ ಎಳೆದಿದೆ
ರಾಜ್ಯದ ತುಂಬೆಲ್ಲಾ ಸಾಕಷ್ಟು ವಿರೋಧ ವ್ಯಕ್ತವಾಯಿತು ಹೀಗಾಗಿ ಇದೀಗ ತನ್ನ ಆದೇಶವನ್ನು ವಾಪಸ್ ಪಡೆದಿದೆ ರಾಜ್ಯ ಸರ್ಕಾರಿ ನೌಕರರ ಮನವಿ ಮೇರೆಗೆ ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ,ವಿಡಿಯೋ ಚಿತ್ರೀಕರಿಸದಂತೆ ಆದೇಶ ಹೊರ ಡಿಸಿತ್ತು.
ರಾಜ್ಯ ಸರ್ಕಾರದ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಡರಾತ್ರಿ ಈ ಆದೇಶವನ್ನು ವಾಪಸ್ ಪಡೆದಿದೆ.