ಧಾರವಾಡ
ಕಬ್ಬಿಣದ ಆಂಗಲ್ ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ್ ವೊಂದು ಪಲ್ಟಿಯಾದ ಘಟನೆ ಧಾರವಾಡದ ಹಾರೋ ಬೆಳವಡಿ ಬಳಿ ನಡೆದಿದೆ.

ಸವದತ್ತಿ ಯಿಂದ ಕಬ್ಬಿಣದ ಆಂಗಲ್ ಗಳನ್ನು ತುಂಬಿಕೊಂಡು ಧಾರವಾಡದ ತಿಮ್ಮಾಪೂರ ಗೆ ಹೊರಟಿದ್ದರು.

ಕಬ್ಬಿಣದ ಆಂಗಲ್ ತುಂಬಿಕೊಂಡು ಹೊರಟಿದ್ದರು ಐದು ಜನ ಟ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿಯಾಗಿ ಟ್ಯಾಕ್ಟರ್ ಪಲ್ಟಿಯಾಗಿದೆ.

ಟ್ಯಾಕ್ಟರ್ ಪಲ್ಟಿಯಾಗಿ ಮೂವರು ಕಬ್ಬಿಣದ ಆಂಗಲ್ ಕೆಳಗೆ ಸಿಲುಕಿಕೊಂಡಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದವರು ನೋಡಿ ಕೆಳಗಡೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡಿದರು.

ಒರ್ವ ಬಾಲಕ ಸೇರಿ ಐದು ಜನರು ಪಾರಾಗಿದ್ದಾರೆ. ಒರ್ವ ನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ. ಟ್ಯಾಕ್ಟರ್ ನಲ್ಲಿದ್ದವರು ತಿಮ್ಮಾಪೂರ ಗ್ರಾಮದವರಾಗಿದ್ದಾರೆ. ಇನ್ನೂ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.