This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಯುವತಿ ಜೊತೆ ಸ್ನೇಹ – ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ – ವಿಡಿಯೊ ವೈರಲ್….!

WhatsApp Group Join Now
Telegram Group Join Now

ಯುವತಿಯ ಜೊತೆ ಸ್ನೇಹ ಮಾಡಿದ್ದ ಯುವಕನಿಗೆ ಧರ್ಮದೇಟು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಗಣಿ ನಗರಿ ಬಳ್ಳಾರಿಯಲ್ಲಿ ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಇದೀಗ ಭಾರೀ ಸದ್ದು ಮಾಡುತ್ತಿವೆ.

ಹೌದು, ಮುಸ್ಲಿಂ ಧರ್ಮದ ಯುವತಿಯ ಕಡೆಯವ್ರು ಅದೇ ಧರ್ಮಯ ಯುವಕನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆಗೆ ಹಳೆಯದಾದ ಕಬ್ಬಿಣದ ಚೇರ್ ಹಾಗೂ ಕಲ್ಲನ್ನ ಬಳಕೆ ಮಾಡಿಕೊಂಡಿದ್ದಾರೆ. ಆ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಮನಕಲಕುವಂತಿವೆ.

ಘಟನೆಗೆ ಕಾರಣ – ನಗರದ ಕೌಲ್ ಬಜಾರ್ ನ ಯುವಕ ಫಜಲ್ ಹಾಗೂ ಯುವತಿ ಅಬಿದಾ ಗಾಡ ಸ್ನೇಹಿತರಾಗಿದ್ದರು. ಈ ಹಿಂದೆ ಅಬಿದಾ ಮನೆ ಕಡೆಯ ವರು ಅವರಿಬ್ಬರಿಗೂ ಮಾತನಾಡದಂತೆ ವಾರ್ನಿಂಗ್ ಮಾಡಿದ್ದರು‌.ಇಷ್ಟಾದ್ರೂ ಇಬ್ಬರೂ ಮತ್ತೇ ಸ್ನೇಹ ಮುದುವರೆಸಿದ್ದರಿಂದ ಅಬಿದಾ ಮನೆಯ ಕಡೆಯವರಿಂದ ನಡುರಸ್ತೆಯಲ್ಲೇ ಯುವಕ‌ ಫಜಲ್ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿರೋದು ಇದೀಗ ಬೆಳಕಿಗೆ ಬಂದಿದೆ.

ಯುವತಿ ಅಬಿದಾ ತಂದೆ ಆರೀಫ್ ಮತ್ತು‌ ಚಿಕ್ಕಪ್ಪ ಇದಾಯತ್ ಸೇರಿ ಎಂಟು ಮಂದಿಯ ಗುಂಪೊಂದು ಫಜಲ್ ಹಾಗೂ ಆತನ ತಂದೆ ವಲಿಬಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮ ಗಂಭೀರ ಗಾಯಗಳಾಗಿದ್ದು,‌ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಇದಾಯತ್ ಸರ್ಕಾರಿ ನೌಕರರಾಗಿದ್ದಾರೆ.

ಇದಾಯತ್ ಸೇರಿ ಎಂಟು ಮಂದಿಯ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಘಟನೆ ನಡೆದು ಐದು ದಿನ ಕಳೆದ್ರೂ ಕೂಡ ಆರೋಪಿಗಳನ್ನ ಈವರೆಗೂ ಬಂಧಿಸಿಲ್ಲ‌ ಎಂಬ ಆರೋಪವೂ ಈಗ ಕೂಡ ಕೇಳಿಬಂದಿದೆ.ಏನೇ ಆಗಲಿ ಚಿಕ್ಕ ವಿಚಾರಕ್ಕೆ ಹೀಗೆ ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದು ವಿಷಾದದ ಸಂಗತಿ.


Google News

 

 

WhatsApp Group Join Now
Telegram Group Join Now
Suddi Sante Desk