ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡದಲ್ಲಿ ಧಾರಕಾರ ಮಳೆಯಾಗುತ್ತಿದೆ. ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ ಇತ್ತ ಧಾರವಾಡದಲ್ಲೂ ಕೂಡಾ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದೆ. ಗಾಳಿ ಹಾಗೂ ಗುಡುಗು ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸುತ್ತಿದ್ದು ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ.

ಕಳೆದ ಅರ್ಧ ಗಂಟೆಯಿಂದಲೂ ಅವಳಿ ನಗರದಲ್ಲಿ ಸಾಕಷ್ಚು ಪ್ರಮಾಣ ದಲ್ಲಿ ಮಳೆ ಸುರಿಯುತ್ತಿದೆ.ಇನ್ನೂ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಹುಬ್ಬಳ್ಳಿ ಧಾರವಾಡ ಮಂದಿಗೆ ಕೂಲ್ ಕೂಲ್ ವಾತಾವರಣ ಕಂಡು ಬಂದಿತು.
ಬೆಳಿಗ್ಗೆಯಿಂದಲೂ ಇದ್ದ ಮೋಡ ಕವಿದ ವಾತಾವರಣ ಗಾಳಿ ಸಹಿತ ಮಳೆಯಿಂದಾಗಿ ನಗರದಾದ್ಯಂತ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಇತ್ತ ಧಾರವಾಡದಲ್ಲೂ ಕೂಡಾ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.
ಮಹೇಶ್ ಬೋಜಗಾರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಡೆಸ್ಕ್ ಧಾರವಾಡ