ನವನಗರ –
ಟ್ಯಾಕ್ಟರ್ ಪಲ್ಟಿಯಾದ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ನವನಗರದ ಗಾಮನಗಟ್ಟಿ ಕ್ರಾಸ್ ನಲ್ಲಿ ಈ ಒಂದು ಅಪಘಾತ ನಡೆದಿದೆ. ಗಾಮನಗಟ್ಟಿಯಿಂದ ಮುಖ್ಯರಸ್ತೆಗೆ ಬರುವಾಗ ರಸ್ತೆ ತಿರುವಿನಲ್ಲಿ ತಗೆದುಕೊಳ್ಳುವಾಗ ಈ ಒಂದು ಘಟನೆ ನಡೆದಿದೆ. ತಿರುವಿನಲ್ಲಿ ಉಬ್ಬು ಇದೆ ಇದನ್ನು ನೋಡದೆ ಟ್ಯಾಕ್ಟರ್ ಚಾಲಕ ಅದರ ಮೇಲೆ ಹತ್ತಿಸಿದ್ದಾನೆ ಹತ್ತುತ್ತಿದ್ದಂತೆ ಏಕಾಎಕಿಯಾಗಿ ಟ್ಯಾಕ್ಟರ್ ಪಲ್ಟಿಯಾಗಿದೆ. ಪಲ್ಟಿಯಾಗುತ್ತಿದ್ದಂತೆ ಟೇಲರ್ ಬಡಿದು ವಿಶ್ವನಾಥ ರಾಮಚಂದ್ರನ್ ಗಾಯಗೊಂಡಿದ್ದಾನೆ.ಬೆಳಗಾವಿ ಮೂಲದ ಇವರು ಕುಟುಂಬ ಸಮೇತರಾಗಿ ಗಾಮಗಟ್ಟಿ ಕ್ರಾಸ್ ನಲ್ಲಿ ನಿಂತುಕೊಂಡಿದ್ದರು. ಸಧ್ಯ ತೀವ್ರವಾಗಿ ಗಾಯಗೊಂಡಿರುವ ಇವರನ್ನು ಎಸ್ ಡಿಎಮ್ ಗೆ ದಾಖಲು ಮಾಡಲಾಗಿದೆ. ಇನ್ನೂ ಇತ್ತ ಟೇಲರ್ ನಲ್ಲಿದ್ದ ಮೂರು ನಾಲ್ಕು ಜನರಿಗೂ ಕೂಡಾ ಗಂಭೀರವಾದ ಗಾಯಗಳಾಗಿದ್ದು ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ವಿಷಯ ತಿಳಿದ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.