ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಎರಡು ದಿನಗಳ ಹಿಂದೆಯಷ್ಟೇ KAT ತಡೆಯಾಜ್ಞೆ ನೀಡಿದ ಕುರಿತು ಈಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ ಹೌದುಬೀ ಒಂದು ತಡೆಯಾಜ್ಞೆ ಕೇವಲ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಕ್ಕೆ ಮಾತ್ರವಾಗಿದೆ.ಇನ್ನೂಳಿದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿದೆ.2016 ರಲ್ಲಿ ನೇಮಕಗೊಂಡಿದ್ದ ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರು ನ್ಯಾಯಾಲಯ ಮೊರೆ ಹೋಗಿದ್ದರು. ಹೀಗಾಗಿ ಇವರಿಗೆ ಅಷ್ಟೇ ವರ್ಗಾವಣೆಗೆ ತಡೆಯಾಜ್ಞೆಯನ್ನು ನ್ಯಾಯಾಲಯ ನೀಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ
ಈ ಒಂದು ನ್ಯಾಯಾಲಯದ ತಡೆಯಾಜ್ಞೆ ಕೇವಲ ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮಾತ್ರ.ಹೀಗಾಗಿ ಈ ಒಂದು ತಡೆಯಾಜ್ಞೆ ಯಿಂದ ಆತಂಕಗೊಂಡಿದ್ದ ನಾಡಿನ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಇತರೆ ಶಿಕ್ಷಕರು ಆತಂಕವನ್ನು ಪಡುವ ಅವಶ್ಯಕತೆ ಇಲ್ಲ. ಇದನ್ನು ಬಿಟ್ಟು ಬೇರೇ ವರ್ಗಾವಣೆ ನಡೆಯುತ್ತದೆ ಎಂಬ ಮಾಹಿತಿ ಇಲಾಖೆಯಿಂದ ಕೇಳಿ ಬಂದಿದ್ದು ಇದರಿಂದಾಗಿ ಶಿಕ್ಷಕರು ನೆಮ್ಮದಿಯಾಗಿದ್ದು ಸಂತೋಷ ಗೊಂಡಿ ದ್ದಾರೆ.