ಧಾರವಾಡ –

ಇತ್ತೀಚಿಗೆ ನಿಧನರಾದ ನಾಡಿನ ಹಿರಿಯ ಕವಿ ಡಾ ಸಿದ್ದಲಿಂಗಯ್ಯ ಅವರಿಗೆ ಧಾರವಾಡದಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು. ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಗೃಹ ಕಚೇರಿಯಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು. ಮೃತರಾದ ಹಿರಿಯ ಕವಿಯ ಭಾವಚಿತ್ರಕ್ಕೆ ಪುಷ್ಪಾ ರ್ಪಣೆ ಮಾಡಿ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು.

ಶಾಸಕ ಅಮೃತ ದೇಸಾಯಿ ನೇತ್ರತ್ವದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು. ಶಾಸಕ ಅಮೃತ ದೇಸಾ ಯಿ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಸೇರಿದಂತೆ ಹಲವರು ಹಿರಿಯ ಕವಿಯ ಭಾವಚಿತ್ರಕ್ಕೆ ಪುಷ್ಪಾ ರ್ಪಣೆ ಮಾಡಿ ನೆನೆದರು. ಈ ಒಂದು ಸಂದರ್ಭದಲ್ಲಿ ಶಾಸಕ ಅಮೃತ ದೇಸಾಯಿ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಬಿಜೆಪಿ ಮುಖಂಡ ರುದ್ರಪ್ಪ ಅರಿವಾಳದ, ಮಹೇಶ್ ತೊಗಲಂಗಿ,ಎಸ್ ಎಸ್ ದೊಡಮನಿ, ಸಂಗಮೇಶ ಮಾದರ,ಕಲ್ಮೇಶ ಹಾದಿಮನಿ.ಕರಿಯಪ್ಪ ಹುಲಮನಿ,ಬಸವರಾಜ ಮೇಗಡೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ನಿಧನರಾದ ಹಿರಿಯ ಕವಿಯನ್ನು ನೆನೆದು ಮತ್ತೊಮ್ಮೆ ನಮನಗಳನ್ನು ಸಲ್ಲಿಸಿದರು.