This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಭ್ರಷ್ಟ ಸರ್ಕಾರಿ ಅಧಿಕಾರಿಗಳು – ಲಕ್ಷ ಲಕ್ಷ ರೂಪಾಯಿ ಲಂಚ ಪಡೆಯುವಾಗ ಟ್ರ್ಯಾಪ್…..

WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೌದು ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಕಾರ್ಖಾನೆ ಮತ್ತು ಬಾಯ್ಲರ್​​​​ಗಳ ಇಲಾಖೆಯ ಆಡಳಿತ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ

ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ನಗರದ ವಿನೋಬ ನಗರ ನಿವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ ಎಂಬ ಕಾರ್ಖಾನೆಯ ಲೈಸನ್ಸ್​​​ ರದ್ದುಪಡಿಸಲು ಲಂಚ ಪಡೆಯುತ್ತಿದ್ದರು

ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಎಂಬುವವರನ್ನು ಲೋಕಾ ಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಕಚೇರಿಯ ಸೂಪರ್​​ವೈಸರ್​​ ಆದ ವಿಠಲನಾಯ್ಕ ಲಂಚಕ್ಕೆ ಬೇಡಿಕೆ ಇಟ್ಟಿದ್ದು 15 ಸಾವಿರ ರೂ. ಗಳನ್ನು ಪಡೆದಿದ್ದರು.ಆದರೂ ಲೈಸೆನ್ಸ್ ರದ್ದತಿ ಪ್ರಮಾಣ ಪತ್ರ ನೀಡಿರಲಿಲ್ಲ.ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ವಿಚಾರಿ ಸಿದಾಗ ನಾವು ತಿಳಿಸಿದ ಹಣ ನೀಡಿದ ನಂತರ ಪ್ರಮಾಣ ಪತ್ರ ನೀಡುವುದಾಗಿ ಹೇಳಿದ್ದರು.

ರಾಕೇಶ್ ಪಟೇಲ್‍ ಆರ್ಥಿಕವಾಗಿ ನಷ್ಟದಲ್ಲಿದ್ದರೂ ಪುನಃ 30 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಆಗ ರಾಕೇಶ್ ದಿನಾಂಕ 03-03-2023 ರಂದು ಲೋಕಾಯುಕ್ತಕಚೇರಿಗೆ ಬಂದು ದೂರಿ ನೀಡಿ ಪ್ರಕರಣ ದಾಖಲಿಸಿದ್ದರು.

.ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹರಿಹರ ಬೆಸ್ಕಾಂ ಇಂಜಿನಿಯರ್: ದಾವಣಗೆರೆಯಲ್ಲಿ ಗುತ್ತಿಗೆದಾರನಿಗೆ ಕಾಮಗಾರಿ ಮಂಜೂರಾತಿ ನೀಡುವುದಕ್ಕೆ ಲಂಚ ಪಡೆಯುತ್ತಿದ್ದ ಹರಿಹರ ಬೆಸ್ಕಾಂ ಇಂಜಿನಿಯರ್, ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕರಿಬಸಯ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.

ಇನ್ನೂ ಇನ್ನೊಂದು ಪ್ರಕರಣ ದಲ್ಲಿ ಹರಿಹರದ ತುಂಗಭದ್ರಾ ನದಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಲೆಗೆ ಬೀಳಿಸಿದ್ದರು. ಒಂದು ಫೈಲ್​ಗೆ ಐದು ಸಾವಿರ ಅಂತಾ 15 ಸಾವಿರ ರೂ ಗಳಿಗೆ ಕರಿಬಸಯ್ಯನವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈಗಾಗಲೇ ಒಂಬತ್ತು ಸಾವಿರ ರೂಪಾಯಿ ಪಡೆದಿದ್ದ ಇಂಜಿನಿಯರ್ ಕರಿಬಸಯ್ಯ, ಇನ್ನುಳಿದ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk