ಧಾರವಾಡ –
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದರೆ ಹಾಗೆ ಹೀಗೆ ಎನ್ನುತ್ತಾ ಮೂಗು ಮುರಿಯುವವರೇ ಹೆಚ್ಚು ಖಾಸಗಿ ಶಾಲೆಗಳ ನಡುವೆ ನಮ್ಮ ಸರ್ಕಾರಿ ಶಾಲೆ ಗಳು ಇನ್ನೂ ಹೈಟೆಕ್ ಆಗಿವೆ ಅವುಗಳಿಗಿಂತ ಯಾವು ದರಲ್ಲೂ ಕಡಿಮೆ ಇಲ್ಲ ಎನ್ನೊದಕ್ಕೆ ಧಾರವಾಡದ ಕರಡಿಗುಡ್ಡ ಸರ್ಕಾರಿ ಶಾಲೆಯೇ ಸಾಕ್ಷಿ

ಹೌದು ಧಾರವಾಡ ತಾಲೂಕಿನ ಕರಡಿಗುಡ್ಡದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣಕ್ಕೆ ಕಾಲಿಟ್ಟರೇ ಸಾಕು ಇದೇನು ಸರ್ಕಾರಿ ಶಾಲೆನಾ ಅಥವಾ ವಿದೇಶ ದಲ್ಲಿರುವ ಯಾವುದಾದರೂ ಖಾಸಗಿ ಶಾಲೆನಾ ಎಂಬ ಅನುಮಾನ ಕಂಡು ಬರುತ್ತದೆ

ಹೌದು ಇದಕ್ಕೆ ಮುಖ್ಯ ಕಾರಣ ಈ ಒಂದು ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಸ್.ಜಿ.ಭಂಡಾರಿ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ 2020 ರ ಅಪ್ನಾದೇಶ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಿ ಎಸ್ ಅಂಕಲಿ ಹಾಗೂ ಸಿಬ್ಬಂದಿ ವರ್ಗದವರ ಹಾಗೂ SDMC ಉಪಾಧ್ಯಕ್ಷರು ಸರ್ವ ಸದಸ್ಯರು.ಗ್ರಾಮದ ಗುರು ಹಿರಿಯರು ಹಳೆಯ ಹಾಗೂ ಇಂದಿನ ವಿದ್ಯಾರ್ಥಿಗಳ ಶ್ರಮ


ಇವರೆಲ್ಲರ ಬಿಡುವಿಲ್ಲದ ಪ್ರಯತ್ನದಿಂದ ಶಾಲೆಯನ್ನು ತುಂಬಾ ತುಂಬಾ ಸುಂದರಗೊಳಿಸಲಾಗಿದೆ.ಇನ್ನೇನು ಮಕ್ಕಳಿಗೆ ಸ್ವಾಗತ ಮಾಡುವುದು ಮಾತ್ರ ಅಷ್ಟೇ ಬಾಕಿ ಉಳಿದಿದೆ ಜನಸಮುದಾಯದ ಮತ್ತು ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಇದ್ದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಲೂ,ಸುಂದರ ಮತ್ತು ಆಕರ್ಷಣೆಯ ಆಗುವುದರಲ್ಲಿ ವಯಶವ ಸಂದೇಹವೂ ಇಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ


ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಈತರಹ ಜನಸಮು ದಾಯದ ಶಿಕ್ಷಕರಿಗೆ ಸಹಕಾರ ನೀಡುವುದು ಇಂದು ತೀರ ಅಗತ್ಯವಿದೆ ಬೇಗ ಶಾಲೆ ಆರಂಭ ಆಗಿ ಮಕ್ಕಳ ಕಲರವ ಕಾಣಲಿ ಅನ್ನುವುದು ಎಲ್ಲರ ಆಶಯವಾಗಿ ದ್ದು ಸಂತೋಷದ ಸಂಗತಿಯಾಗಿದೆ


ಇನ್ನೂ ಪ್ರಮುಖವಾಗಿ ಕರೋನಾ ಮಹಾಮಾರಿ ಯಿಂದ ಎಲ್ಲಾ ಶಾಲೆಗಳು ಮಕ್ಕಳಿಲ್ಲದೇ ಬಿಕೋ ಅನ್ನುತ್ತಿವೆ ಇಂತಹುದರಲ್ಲಿ ಶಿಕ್ಷಕರು ಜೂನ 15. ರಿಂದ ತಮ್ಮ ತಮ್ಮ ಶಾಲೆಗಳಿಗೆ ಹೋಗಿ ಶಾಲೆಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮಕ್ಕಳಿಗೆ ಸ್ವಾಗತಿಸ ಲು ಸಜ್ಜಾಗಿರುವುದು ಕಣ್ಣಿಗೆ ಹಬ್ಬ ದಂತೆ ಕಾಣುತ್ತಿದೆ.


ಇನ್ನೂ ಸುಂದರವಾಗಿ ಕಾಣುತ್ತಿರುವ ಈ ಶಾಲೆಯ ಕುರಿತು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹರ್ಷ ವ್ಯಕ್ತಪಡಿಸಿ ಕಂಗೊಳಿಸುವಂತೆ ಮಾಡಿದ ಮನಸ್ಸುಗಳಿಗೆ ಕೈಗಳಿಗೆ ಧನ್ಯವಾದ ಹೇಳಿದ್ದಾರೆ