ನವದೆಹಲಿ –
ಸೆಮಿಪೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಶುಭಹಾರೈಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಅಂದು ಇಂದು ಎಂದೆಂದೂ ಟೀಂ ಭಾರತ ಜೈ ಹೋ ಎನ್ನುತ್ತಾ ಪೈನಲ್ ಪಂದ್ಯ ದಲ್ಲಿ ಗೆಲುವು ನಿಮ್ಮದಾಗಲಿ ಎಂದ ಪ್ರಹ್ಲಾದ್ ಜೋಶಿಯವರು
ವಿಶ್ವಕಪ್ ಕ್ರಿಕೇಟ್ ಪಂದ್ಯದಲ್ಲಿ ನ್ಯೂಲಿಲೆಂಡ್ ವಿರುದ್ದ ಸೆಮಿಪೈನಲ್ ಪಂದ್ಯವನ್ನು ಗೆದ್ದ ಭಾರತ ತಂಡಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ವರು ಶುಭ ಹಾರೈಸಿದ್ದಾರೆ.ಹೌದು ಮುಂಬೈ ನ ವಾಂಖೆಡೆ ಮೈದಾನದಲ್ಲಿ ನಡೆದ ಸೆಮಿಪೈನಲ್ ಪಂದ್ಯದಲ್ಲಿ ಅದ್ಭುತವಾಗಿ ಆಟವಾಡಿದ ಭಾರತ ತಂಡಕ್ಕೆ ಪ್ರಹ್ಲಾದ್ ಜೋಶಿಯವರು ಶುಭಹಾರೈಸಿ ದ್ದಾರೆ.
ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀ ಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮತ್ತು ಅತ್ಯ ದ್ಭುತ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದ
ಮೊಹಮ್ಮದ್ ಶಮಿ ಅವರಿಗೂ ಕೂಡಾ ಅಭಿನಂ ದನೆಗಳು ಎಂದಿದ್ದಾರೆ.ಇನ್ನೂ ಪೈನಲ್ ಪಂದ್ಯ ದಲ್ಲೂ ಗೆಲುವು ನಿಮ್ಮದಾಗಲಿ ಅಂದರೆ ನಮ್ಮೆ ಲ್ಲರದ್ದಾಗಲಿ ಶುಭವಾಗಲಿ ಎಂದು ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..