ನವದೆಹಲಿ –
ಗೆಲುವು ಸಾಧಿಸಿದ ಭಾರತ ತಂಡಕ್ಕೆ ಶುಭಹಾರೈ ಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಂಡಕ್ಕೆ ಆಪತ್ಬಾಂದವನಂತೆ ನಿಂತುಕೊಂಡು ಉತ್ತಮ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಗೆ ಅಭಿನಂ ದನೆ ಸಲ್ಲಿಸಿ ಮುಂದಿನ ಗೆಲುವು ನಿಮ್ಮದಾಗಲಿ ಎಂದು ಭಾರತ ತಂಡಕ್ಕೆ ಶುಭಹಾರೈಸಿದ ಪ್ರಹ್ಲಾದ್ ಜೋಶಿ ಯವರು.
ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡದ ಗೆಲುವಿನ ಪಯಣ ಮುಂದುವರೆದಿದೆ.ಈಗಾಗಲೇ ನಾಲ್ಕು ಪಂದ್ಯಗಳನ್ನ ಗೆದ್ದಿರುವ ಭಾರತ ತಂಡವು ನ್ಯೂಜಿ ಲೆಂಡ್ ವಿರುದ್ದ ಮತ್ತೊಂದು ಪಂದ್ಯವನ್ನು ಗೆದ್ದು ಅಗ್ರಸ್ಥಾನಕ್ಕೇರಿದೆ.ಇನ್ನೂ 20 ವರ್ಷಗಳ ನ್ಯೂಜಿ ಲೆಂಡ್ ವಿರುದ್ದ ಗೆಲುವು ಸಾಧಿಸಿದ ಭಾರತ ತಂಡದ ಗೆಲುವಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸವನ್ನು ವ್ಯಕ್ತಪಡಿಸಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಭಾರತ – ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಅಭೂತಪೂರ್ವ ಪ್ರದರ್ಶನದ ಮೂಲಕ ಭಾರತ ತಂಡವು ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.ಇನ್ನೂ ಎಂದಿನಂತೆ ಇಂದು ಕೂಡಾ ತಂಡಕ್ಕೆ ಆಪತ್ಬಾಂಧವನಂತೆ ನಿಂತುಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ವಿರಾಟ್ ಕೊಹ್ಲಿ ಅವರು ತಂಡವನ್ನು ಗೆಲ್ಲಿಸಿದ್ದಾರೆ ಅವರಿಗೂ ಕೂಡಾ ಅಭಿನಂದನೆಗಳು ಎಂದಿದ್ದಾರೆ
ಇದರೊಂದಿಗೆ ಮುಂದಿನ ಗೆಲುವಿನ ಹಾದಿಯೂ ಭಾರತದ್ದಾಗಿರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ತಮ್ಮ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಖಾತೆಗಳಲ್ಲಿ ಪೊಸ್ಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಧರ್ಮಶಾಲಾ