ಧಾರವಾಡ –
ದೇಶದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಸಮಾಧಿ ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು
ಹಾವು ಕಪ್ಪೆ ನುಂಗತಾ ಇತ್ತಂತೆ ಆಗ ಆ ಕಪ್ಪೆ ಎದುರಿಗೆ ಬಂದ ಹುಳ ತಿನ್ನೋ ಪ್ರಯತ್ನ ಮಾಡಿತಂತೆ
ಆ ರೀತಿ ಕಾಂಗ್ರೆಸ್ ಸ್ಥಿತಿ ಇದೆ ಎಂದರು.

ಕಾಂಗ್ರೆಸ್ ಇಡೀ ದೇಶದಲ್ಲಿ ಮುಳುಗಿ ಹೋಗುತ್ತಿದೆ
ಕಾಂಗ್ರೆಸ್ ಭೂತ ಕಾಲದ ಪಾರ್ಟಿ ಆಗುತ್ತಿದೆ
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಪೂರ್ಣ ವೀಕ್ ಆಗಿದೆ ಅಲ್ಲಿ ಸಧ್ಯಕ್ಕೆ ಕಾಯಂ ಅಧ್ಯಕ್ಷರೇ ಇಲ್ಲ
ಯಾರ ಮೇಲೆ ಯಾರೂ ಕ್ರಮ ಕೈಗೊಳ್ಳೋರಿಲ್ಲ
ಕಾಂಗ್ರೆಸ್ ಪಕ್ಷ ಒಂದು ಜಾತ್ರೆ ಇದ್ದಂತೆ
ಅದು ಹಾಗೆಯೇ ನಡೆದುಕೊಂಡು ಹೋಗುತ್ತಿದೆ ಎಂದರು.