ಧಾರವಾಡ –
ಧಾರವಾಡದಲ್ಲಿ ನಿನ್ನೆ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ಕೈ ಮುಖಂಡ ವಿಜಯ ಕುಲ ಕರ್ಣಿ ಕಾರು ಅಪಘಾತ ಪ್ರಕರಣದಲ್ಲಿ ಕಾರನ್ನು ಚಲಾ ಯಿಸುತ್ತಿದ್ದು ವಿಜಯ ಕುಲಕರ್ಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ವಿಜಯ ಕುಲಕರ್ಣಿ ಒಪ್ಪಿಕೊಂಡಿದ್ದಾರೆ.

ತಡರಾತ್ರಿ ಧಾರವಾಡದ ಸಂಚಾರಿ ಪೊಲೀಸ್ ಠಾಣೆ ಗೆ ಆಗಮಿಸಿದ ವಿಜಯ ಕುಲಕರ್ಣಿ ಕಾರನ್ನು ನಾನೇ ಡ್ರೈವ್ ಮಾಡುತಿದ್ದೆ ಎಂದು ಹೇಳಿದರು.ಇನ್ನೂ ಕಾರು ನಾನೇ ಚಲಾಯಿಸುತಿದ್ದೆ ಬೈಕ್ ಅಡ್ಡ ಬಂದಾ ಗ ಅದನ್ನ ತಪ್ಪಿಸಲು ಹೋಗಿ ಅಪಘಾತವಾಗಿದೆ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದರು

ಅಂಬ್ಯುಲನ್ಸನಲ್ಲಿ ಗಾಯಾಳುಗಳನ್ನ ತೆಗೆದುಕೊಂಡು ಹೋದ ನಂತರ ಅಲ್ಲಿಂದ ನಾನು ಹೋಗಿದ್ದೆನೆ ಎಂದ ರು.ಯಾವುದೇ ಡ್ರಿಂಕ್ ಡ್ರೈವ್ ಇರಲಿಲ್ಲ ಈ ರೀತಿ ಸುಳ್ಳು ಹಬ್ಬಿಸುವುದು ಸರಿಯಲ್ಲ ಈಗಾಗಲೇ ನನಗೆ ಟೆಸ್ಟ್ ಕೂಡ ಮಾಡಲಾಗಿದೆ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಜಯ ಕುಲಕರ್ಣಿ ಹೇಳಿದ ರು