ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತಷ್ಟು ಹೆಚ್ಚು ಚುರುಕುಗೊಳಿಸಿದ್ದಾರೆ. ಈ ಒಂದು ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರುತ್ತಿದ್ದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಪ್ರಕರಣದಲ್ಲಿ ಮತ್ತೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ಅಧಿಕಾರಿಗಳು ಕೊನೆಗೂ ವಶಕ್ಕೆ ತಗೆದುಕೊಂಡಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಇವರನ್ನು ಬಿಟ್ಟು ಬಿಡದೇ ವಿಚಾರಣೆ ಮಾಡುತ್ತಿದ್ದ ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೇ ತಗೆದುಕೊಂಡಿದ್ದಾರೆ. ವಶಕ್ಕೇ ತಗೆದುಕೊಂಡು ತಡರಾತ್ರಿ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು.
ಬೆಳಿಗ್ಗೆ ಇವರಿಗೆ ಕೋವಿಡ್ ಟೆಸ್ಟ್ ಮಾಡಿಸಿದ ನಂತರ ವರದಿ ಬಂದ ಮೇಲೆ ಇವರನ್ನು ಸಿಬಿಐ ನ್ಯಾಯಾಲಾಯದ ನ್ಯಾಯಾಧೀಶರ ಎದುರು ಸಿಬಿಐ ಅಧಿಕಾರಿಗಳು ಹಾಜರು ಮಾಡಲಿದ್ದಾರೆ. ಚಂದ್ರಶೇಖರ್ ಇಂಡಿ ಮತ್ತು ಇನ್ನೊಬ್ಬರನ್ನು ಸಿಬಿಐ ಅಧಿಕಾರಿಗಳು ವಶಕ್ಕೇ ತಗೆದುಕೊಂಡಿದ್ದಾರೆ
ಮಾಹಿತಿ ಬರುತ್ತಿದ್ದಂತೆ ಇತ್ತ ಉಪನಗರ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಠಾಣೆ ಎದುರು ಬ್ಯಾರಿಕೇಡ್ ಹಾಕಿದರು.ಪೊಲೀಸ್ ಠಾಣೆ ಮುಂದೆ ಸಾಕಷ್ಟು ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕಿ ಭದ್ರತೆಯನ್ನು ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಮತ್ತು ಪಿಎಸೈ ಶ್ರೀಮಂತ ಹುಣಸಿಕಟ್ಟಿ ಮತ್ತು ಸಿಬ್ಬಂದಿ ವರ್ಗದವರು ಭದ್ರತೆಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ ವಿನಯ ಕುಲಕರ್ಣಿ ಸೋದರ ಮಾವ ಇವರಿಗೆ ಕೋವಿಡ್ ಟೆಸ್ಟ್ ನ್ನು ಸಿಬಿಐ ಅಧಿಕಾರಿಗಳು ಮಾಡಿಸಲಿದ್ದಾರಂತೆ ಇನ್ನೂ ಇನ್ನೊರ್ವನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ತಗೆದುಕೊಂಡಿದ್ದು ನಾಳೆ ಅವನನ್ನು ಕರೆತರುವ ಸಾಧ್ಯತೆ ಇದೆ. ಒಟ್ಟಾರೆ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರಿದ್ರು ಅವರ ಸಂಬಂಧಿಕರಿಗೆ ಮಾತ್ರ ಯೊಗೀಶಗೌಡ ಕೊಲೆ ಸುತ್ತಿಕೊಳ್ಳುತ್ತಿದ್ದು ಇನ್ನೂ ಯಾರು ಯಾರಿಗೂ ಸುತ್ತಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ,