ಧಾರವಾಡ ಭೀಕರ ಅಪಘಾತ ಸಿಸಿ ಟಿವಿ ಯಲ್ಲಿ ದಾಖಲಾಯಿತು ದೃಶ್ಯ

Suddi Sante Desk

ಧಾರವಾಡ –

ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿ ಯಲ್ಲಿ ನಡೆದ ಅಪಘಾತ ದ ದೃಶ್ಯವು ಸಿಸಿ ಟಿವಿ ಯಲ್ಲಿ ದಾಖಲಾಗಿದೆ.ಹೌದು ಮಧ್ಯಾಹ್ನ ನಡೆದ ಅಪಘಾತ ದಲ್ಲಿ ಧಾರವಾಡದ ವಿದ್ಯಾಗಿರಿ ಯ ಪೊಲೀಸ್ ಪೇದೆ ನಿಂಗಪ್ಪ ಬೂಶನ್ನವರ ಮೃತರಾಗಿದ್ದು ವೇಗವಾಗಿ ಬಂದ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಒಂದು ಅಪಘಾತ ಸಂಭವಿಸಿದೆ.

ವೇಗವಾಗಿ ಬಂದ ಲಾರಿ ಚಾಲಕ‌ ಏಕಾಏಕಿ ಯಾಗಿ ತಿರುವಿನಲ್ಲಿ ಲಾರಿಯನ್ನು ತಗೆದುಕೊಂಡಿದ್ದು ಹೀಗಾಗಿ ಅದರ ಪಕ್ಕದಲ್ಲಿ ಬರುತ್ತಿದ್ದ ಇಬ್ಬರೂ ಮೂರು ಬೈಕ್ ಸವಾರರಲ್ಲಿ ಒರ್ವ ಬೈಕ್ ಸವಾರ ಸ್ಥಳದಲ್ಲೇ ಮೃತರಾಗಿದ್ದು ಇನ್ನೂ ಸ್ವಲ್ಪದರಲ್ಲೇ ಇನ್ನೊರ್ವ ಬೈಕ್ ಸವಾರ ಪಾರಾಗಿದ್ದಾರೆ.

ಹೀಗಾಗಿ ದೊಡ್ಡದಾದ ಅನಾಹುತವೊಂದು ತಪ್ಪಿದಂತಾಗಿದ್ದು ಲಾರಿ ಚಾಲಕನ ಚಾಲನೆ ಎದೆ ಝಲ್ ಎನ್ನುವಂತೆ ಮಾಡಿದ್ದು ಸಿಸಿ ಟಿವಿ ಯಲ್ಲಿ ದಾಖಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.