ಒರಿಸ್ಸಾ –
ಧಾರವಾಡದ ಹೆಸ್ಕಾಂ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣವರ ಮತ್ತೊಂದು ದಾಖಲೆ ಮಾಡಿದ್ದಾರೆ. ಇದರೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ ಹೆಮ್ಮೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ.
ಮೊನ್ನೆ ಮೊನ್ನೆಯಷ್ಟೆ ಒಂದು ದಾಖಲೆ ಮಾಡಿದ್ದ ಇವರು ಒರಿಸ್ಸಾದ ಕೊನಾರ್ಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಪ್ರೋಪೆಷನಲ್ ಕ್ರೀಡಾಪಟುಗಳ ನಡುವೆಯೂ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮಾಡಿರೋ ಸಾಧನೆ ಮಾಡಿ ಈಗ ಐರನ್ ಮ್ಯಾನ್ ಆಗಿದ್ದಾರೆ.
ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲು ಮೂಡಿಸುವಲ್ಲಿ ಹುಬ್ಬಳ್ಳಿ ಹೆಸ್ಕಾಂ ಜಾಗೃತದಳದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಯಶಸ್ವಿಯಾಗಿದ್ದಾರೆ. ಬೇರೆ ರಾಜ್ಯದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ ದೇಶದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಒರಿಸ್ಸಾದ ಕೊನರ್ಕಾ ದಲ್ಲಿ ನಡೆದ ಸ್ಪರ್ಧೆಯಲ್ಲಿ 42.2 ಕಿಲೋಮೀಟರ್ ರನ್ನಿಂಗ್,180 ಕಿಲೋಮೀಟರ್ ಸೈಕ್ಲಿಂಗ್ ಮತ್ತು 4 ಕಿಲೋಮೀಟರ್ ಈಜು ಅನ್ನು ಕೇವಲ 15 ಗಂಟೆಯಲ್ಲಿ ಪೂರೈಸಿ ಪುಲ್ ಐರನ್ ಮ್ಯಾನ್ ಪೊಲೀಸ್ ಅಧಿಕಾರಿಯಾದರು ಇವರು
ಈ ಹಿಂದೆ ಅಹಮದನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಇವರು ಈಗ ಕೊನರ್ಕಾದಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನೆಗೂ ತಮ್ಮ ಜೀವನದ ಕನಸನ್ನು ನನಸು ಮಾಡಿಕೊಂಡು ಪುಲ್ ಐರನ್ ಮ್ಯಾನ್ ಪೊಲೀಸ್ ಅಧಿಕಾರಿಯಾದರು ದೇಶದ ಮೊದಲ ಅಧಿಕಾರಿ.
ಇದೊಂದು ರಾಜ್ಯದ ಪೊಲೀಸ್ ಇತಿಹಾಸದಲ್ಲಿ ಇದು ಮೊದಲ ದಾಖಲೆ ಮಾಡಿದ ಪೊಲೀಸ್ ಅಧಿಕಾರಿ ಎಂಬ ಕೀರ್ತಿ ಗೆ ಹೆಸ್ಕಾಂ ಜಾಗೃದಳ ದಲ್ಲಿರುವ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರ ಈ ಸಾಧನೆ ರಾಜ್ಯದ ಪೊಲೀಸ್ ಇಲಾಖೆಗೆ ಕೊಡುಗೆಯಾಗಿದೆ. ಇಂತಹದೊಂದು ಸಾಧನೆ ಮಾಡುವಲ್ಲಿ ಮುರುಗೇಶ ಚೆನ್ನಣ್ಣನವರ ಪರಿಶ್ರಮ ನಿರಂತರವಾಗಿತ್ತು. ಇದೀಗ ಮತ್ತೊಂದು ಸಾಧನೆ ಯನ್ನ ಈ ಮೂಲಕ ಮಾಡಿದ್ದಾರೆ.ದೇಶದ ಬಹುತೇಕ ರಾಜ್ಯಗಳಿಂದ ಆಗಮಿಸಿದ್ದ ನೂರಾರೂ ಸ್ಪರ್ಧಾಳುಗಳ ನಡುವೆಯೂ ಚೆನ್ನಣ್ಣನವರ ಅವರು ಮಾಡಿರುವ ಸಾಧನೆ ಕಡಿಮೆಯದ್ದಲ್ಲ. ಪೊಲೀಸ್ ಇಲಾಖೆ ಯಲ್ಲಿದ್ದುಕೊಂಡೇ, ಇಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿರುವುದು ಅಮೋಘವಾಗಿದೆ. ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರು ರಾಜ್ಯದ ಪೊಲೀಸ್ ಇಲಾಖೆಯ ಗೌರವವನ್ನ ಮತ್ತಷ್ಟು ಹೆಚ್ಚಿಸಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂಬೊದು ನಮ್ಮ ಆಶಯ.