ಧಾರವಾಡ ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬ್ಯಾನರ್ ಗೆ ಕಪ್ಪು ಮಸಿ – ಕರವೇ ಕಾರ್ಯಕರ್ತರಿಂದ ಬಳಿದು ಆಕ್ರೋಶ…..

Suddi Sante Desk

ಧಾರವಾಡ –

ಹಿಂದಿ ದಿವಸ‌ ಅಚರಣೆ ವಿರೋಧಿಸಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬ್ಯಾನರ್ ಗೆ ಕಪ್ಪು ಮಸಿ ಬಳಿದಿದ್ದಾರೆ ಕರವೇ ಕಾರ್ಯಕರ್ತರು

ಹೌದು ಧಾರವಾಡ ಹಿಂದಿ‌ ಪ್ರಚಾರ ಸಭಾ ಎದುರಿನ ಬ್ಯಾನರಗೆ ಕಪ್ಪು ಮಸಿ ಬಳಿದಿದ್ದಾರೆ ಕರವೇ ಕಾರ್ಯಕರ್ತರು.ಕರವೇ ಶಿವರಾಮೆಗೌಡ ಬಣದಿಂದ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸ ಲಾಯಿತು‌

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಹಿಂದಿ ಪ್ರಚಾರ ಸಭಾ ದಲ್ಲಿ ಈ ಒಂದು ಘಟನೆ ನಡೆದಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾವಚಿತ್ರ ಇರುವ ಹಿಂದಿ‌ ದಿವಸದ ಬ್ಯಾನರ್ ಗೆ ಪರಮೇಶ್ವರ ಕಾಳೆ ನೇತೃತ್ವದಲ್ಲಿ ಈ ಒಂದು ಹೋರಾಟವನ್ನು ಮಾಡಿ ನಂತರ ಮಸಿ ಬಳಿದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.