ಅವಳಿ ನಗರದಲ್ಲಿ ಬೆಳ್ಳಂ ಬೆಳಿಗ್ಗೆ ಬಂದ್ ಹೇಗಿದೆ ಗೊತ್ತಾ – ಪ್ರತಿಭಟನೆ ಕಾವಿನ ಕಂಪ್ಲೀಟ್ ಮಾಹಿತಿ…..

Suddi Sante Desk

ಹುಬ್ಬಳ್ಳಿ ಧಾರವಾಡ –

ಕೇಂದ್ರ ಸರ್ಕಾರದ ಕೃಷಿ ನೀತಿ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಹೌದು ಧಾರವಾಡ ದಲ್ಲಿ RKS ಸಂಘಟನೆ ಸೇರಿ ದಂತೆ ಹಲವಾರು ಸಂಘಟನೆಯವರು ಬಂದ್ ಬೆಂಬಲಿಸಿ ನಗರದಲ್ಲಿ ಪ್ರತಿಭಟನೆ ಮಾಡಿದರು. ನಗರದ ಜುಬಲಿ ವೃತ್ತದಲ್ಲಿ ರಸ್ತೆ ತಡೆ ಮಾಡಿದ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಇನ್ನೂ ಇದೇ ವೇಳೆ ಬಂದ್ ಗೆ ಬೆಂಬಲವನ್ನು ನೀಡದ ಆಟೋ ಚಾಲಕನಿಗೆ ಕಾಲು ಮುಗಿದ ಹೋರಾಟ ಗಾರು ಬೆಂಬಲ ನೀಡುವಂತೆ ಮನವಿ ಮಾಡಿದರು ಇನ್ನೂ ಇತ್ತ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿನಂತೆ ಬಸ್ ಸಂಚಾರ ನಗರದಲ್ಲಿ ಕಂಡು ಬಂದಿತು.

ಧಾರವಾಡ ದಲ್ಲಿ ಪ್ರತಿಭಟನೆ ಮಾಡಿದರೆ ಇತ್ತ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕಂಡು ಬರಲಿಲ್ಲ ಇದರ ನಡುವೆ ಬಸ್ ಸಂಚಾರ ಅದರಲ್ಲೂ ಸಾರಿಗೆ ಮತ್ತು ಖಾಸಗಿ ಬಸ್ ಗಳ ಓಡಾಟ ಕಂಡು ಬಂದಿತು‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.