ಮುಂಬೈ –
ಮಹಿಳಾ ಕಾರ್ಪೋರೇಟರ್ಗೆ ಕಾರ್ಪೊರೇಟರ್ ರೊಬ್ಬರು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪವೊಂದು ಮಹಾರಾಷ್ಟ್ರ ದಲ್ಲಿ ಕೇಳಿ ಬಂದಿದೆ. ಹೌದು ಇಂತಹ ಆರೋಪದಲ್ಲಿ ಮುರ್ಬಾದ್ ನಗರದ ಬಿಜೆಪಿ ಕಾರ್ಪೋರೇಟ್ ನನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಗುರುವಾರ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡುವ ವೇಳೆ ಈ ಬಗ್ಗೆ ಮಾಹಿತಿ ನೀಡಿದ ಅನಿಲ್ ದೇಶ್ ಮುಖ್, ಕಾರ್ಪೊರೇಟರ್ ನಿತಿನ್ ತೆಲವಾನೆ ಬುಧವಾರ ರಾತ್ರಿ 12.40ಕ್ಕೆ ಮಹಿಳಾ ಕಾರ್ಪೊರೇಟರ್ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 452 (ಮನಗೆ ಅತಿಕ್ರಮ ಪ್ರವೇಶ), 354 (ಹಿಂಸೆ), 354ಎ (ಲೈಂಗಿಕ ಕಿರುಕುಳ) ಮತ್ತು 506 (ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅನಿಲ್ ದೇಶ್ ಮುಖ್ ಹೇಳಿದ್ದಾರೆ.ಇದರ ಜೊತೆಗೆ ಜಲಗಾಂವ್ನ ಹಾಸ್ಟೆಲ್ ಯುವತಿಯರಿಗೆ ಪೊಲೀಸರು ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದು ಆಧಾರ ರಹಿತವಾಗಿದ್ದು, ಇಂಥಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.