ಲೋಕೇಶಪ್ಪ ಮಾಸ್ತರ್ ಗೆ ಮನೆಯ ದಾರಿ ತೋರಿಸಿದ ಇಲಾಖೆ – ಒಂದ ಎರಡಾ ಇವರ ಕಾಮಚೇಷ್ಟೇ ಪುರಾಣಗಳು…..

Suddi Sante Desk

ಬೆಂಗಳೂರು –

ಸದಾ ಒಂದಿಲ್ಲೊಂದು ಕಾಮಚೇಷ್ಟೇ ಮಾಡುತ್ತಿದ್ದ ಬೆಂಗಳೂರಿನ ಕೋದಂಡರಾಮಪುರದ ಬಿಬಿಎಂಪಿ ಶಾಲೆಯ ಲೊಕೇಶಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಹೌದು ಈ ಹಿಂದೆ ಸಾಕಷ್ಟು ಘಟನೆಗಳಿಂದ ಮತ್ತು ಸಧ್ಯ ಶಾಲೆಯಲ್ಲಿ ಕಂಡು ಬಂದ ವಿದ್ಯಾದೇಗುಲದಲ್ಲಿ ಅನುಚಿತವಾಗಿ ವರ್ತಿಸಿದ ಶಿಕ್ಷಕ ಲೋಕೇಶಪ್ಪನನ್ನು ಇಲಾಖೆ ಸೇವೆ ಯಿಂದ ಅಮಾನತು ಮಾಡಿ ಆದೇಶವನ್ನು ಮಾಡಿದೆ

ಈ ಹಿಂದಿನ ಶಾಲೆಗಳಲ್ಲೂ ಲೋಕೇಶಪ್ಪ ಇಂತದ್ದೇ ಅನುಚಿತ ವರ್ತನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸೆಕ್ಯೂರಿಟಿ ಮಗಳೊಂದಿಗೂ ಕಾಮ ಚೇಷ್ಟೆ ಮಾಡಲು ಹೋಗಿದ್ದನಂತೆ.ಹಾಲುಣಿಸುತ್ತಿದ್ದ ಮಹಿಳೆಯೊಬ್ಬರ ಅಂಗಾಂಗ ಮುಟ್ಟಿ ಕಾಮಚೇಷ್ಟೆ ಮಾಡಿದ್ದ ಎನ್ನುವ ಆರೋಪಗಳ ನಡುವೆ ಈಗ ಶಾಲೆ ಯಲ್ಲಿ ಪ್ರವೇಶವನ್ನು ಕೇಳಲು ಬಂದ ಮಹಿಳೆ ಯೊಂದಿಗೆ ಮಸಾಜ್ ಮಾಡಿಸಿಕೊಂಡ ಪ್ರಕರಣ.

ಹೌದು ಇದೊಂದು ಸಧ್ಯ ಶಾಲೆಯಲ್ಲಿ ಮಾಡಿದ್ದು ಹೀಗಾಗಿ ಈ ಒಂದು ಸಂಬಂಧ ಆರೋಪಿ ಲೋಕೇ ಶಪ್ಪನಿಗೆ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರೌಢ ಶಾಲೆಯ ಸರ್ಕಾರಿ ಕಟ್ಟಡವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡ ಹಾಗೂ ಸರ್ಕಾರಿ ಕೆಲಸದ ಸಮಯ ದಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರ ಡಿಸಿ ಮನೆಯ ದಾರಿಯನ್ನು ತೋರಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.