ನವಲಗುಂದ ದಲ್ಲಿ ಪರಿಶಿಷ್ಠ ಪಂಗಡದ ವಿರೂಪಾಕ್ಷಪ್ಪ ಕೊಲೆ ಮನೆಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ ಭೇಟಿ ಸಾಂತ್ವನ

Suddi Sante Desk

ನವಲಗುಂದ –

ಪರಿಶಿಷ್ಠ ಪಂಗಡ ಸಮುದಾಯದ ವಿರೂಪಾಕ್ಷಪ್ಪ ಎಂಬುವ ರನ್ನು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದಿದೆ. ತಾಲೂಕಿನ ಆಹೆಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಇನ್ನೂ ಘಟನೆ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪುರುಷೋತ್ತಮ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು

ನವಲಗುಂದ ತಾಲೂಕಿನ ಆಹೆಟ್ಟಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿರೂಪಾಕ್ಷ ಪ್ಪಾ ಅಚಮಟ್ಟಿ ಅವರ ಮೇಲೆ ದೌರ್ಜನ್ಯ ವೆಸಗಿ ಕೊಲೆ ಮಾಡಿದ ಪ್ರಥಮ ವರ್ತಮಾನ ವರದಿಯ ಆಧರಿಸಿ ಇಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಮಾಧಾನ ಹೇಳಿದರು.ಇದೇ ವೇಳೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಿ ದರು

,
ಸರ್ಕಾರದಿಂದ ಸಿಗುವ ಸವಲತ್ತುಗಳು,ಸಂತ್ರಸ್ತರಿಗೆ ದೊರೆಯುವ ಪರಿಹಾರ ಧನ ವಿವರಿಸಿ,ಅವಲಂಬಿತರಿಂದ ಸರ್ಕಾರಿ ನೌಕರಿಗೆ ಪ್ರಸ್ತಾವನೆ ಪಡೆಯಲಾಯಿತು.ಇತ್ತ ಕೊಲೆ ಆರೋಪಿಯನ್ನು ಬಂಧಿಸಲಾಗಿದ್ದು ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.ನವಲಗುಂದ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಕಪಿಲಾ ಯಲಿವಿಗಿ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.