ಸರ್ಕಾರದಿಂದ ಪ್ರಥಮ ಬಾರಿಗೆ ಐತಿಹಾಸಿಕ ಮಹಿಳೆ ಒನಕೆ ಓಬವ್ವ ಜಯಂತಿ ಆಚರಣೆ – ರಾಜ್ಯದಲ್ಲಿ ಮತ್ತೊಂದು ಜಯಂತಿ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಮತ್ತೊಂದು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.ಹೌದು ಒನಕೆ ಓಬವ್ವ ಜನ್ಮ ದಿನವಾದ ನವೆಂಬರ್ 11ರಂದು ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿಯನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.ಈ ಕುರಿತಂತೆ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ನಡವಳಿಗಳನ್ನು ಹೊರಡಿ ಸಿದ್ದಾರೆ. ಇನ್ನೂ ಪ್ರಮುಖವಾಗಿ ಒನಕೆ ಓಬವ್ವ ಹೆಸರು ಚಿತ್ರದುರ್ಗ ಇತಿಹಾಸದಲ್ಲಿ ಮರೆಯಲಾಗದ್ದು ಅವರನ್ನು ಕರ್ನಾಟಕ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕರ ಸಾಲಿನಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದ ಹನುಮಪ್ಪನ ಹೆಂಡತಿಯಾ ಗಿದ್ದರು.

ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಹಟತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತ್ರವ ನ್ನಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ಚಿತ್ರದು ರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದಳು.ಕೊನೆಯಲ್ಲಿ ಎದುರಾಳಿಯು ಬೆನ್ನ ಹಿಂದೆ ಬಂದಿದ್ದನ್ನು ಗಮನಿಸ ಲಾಗದೇ ಶುತ್ರುವಿನ ಕತ್ತಿಗೆ ಬಲಿಯಾದಳು

ಅಂದಿನಂದ ಅವರು ಒನಕೆ ಓಬವ್ವ ಎಂದು ಪ್ರಸಿದ್ಧಿ ಹೊಂದಿರುತ್ತಾರೆ.ಈ ಮೇಲ್ಕಂಡಗಳ ಅಂಶಗಳ ಹಿನ್ನಲೆ ಯಲ್ಲಿ ಒನಕೆ ಓಬವ್ವರ ಜನ್ಮ ದಿನವಾದ ನವೆಂಬರ್ 11 ರಂದು ಒನಕೆ ಓಬವ್ವ ಜಯಂತಿಯನ್ನಾಗಿ ಆಚರಣೆ ಮಾಡುವಂತೆ ಘೋಷಿಸಲಾಗಿದೆ ಅದರಂತೆ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿಯನ್ನು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಸರ್ಕಾರ ಆದೇಶಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.