ಶಿಥಿಲಗೊಂಡ ಕೋಣೆಯಲ್ಲಿಯೇ ಮಕ್ಕಳಿಗೆ ಪಾಠ – ಭಯದ ನಡುವೆ ಮಕ್ಕಳು ಶಿಕ್ಷಕರು……

Suddi Sante Desk

ಶಾವಂತಗೇರಾ (ದೇವದುರ್ಗ) –

ದೇವದುರ್ಗ ದ ಶಾವಂತಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ಸಂಪೂರ್ಣವಾಗಿ ಹಾಳಾ ಗಿದ್ದು ಶಿಥಿಲಗೊಂಡಿವೆ ಇದರ ನಡುವೆ ಶಾಲೆಯಲ್ಲಿ ಮಕ್ಕಳು ಭಯದಲ್ಲಿಯೇ ಪಾಠಗಳನ್ನು ಕಲಿಯುತ್ತಿದ್ದಾರೆ ಪ್ರಸ್ತುತ ಶಿಥಿಲವಾದ ಕಟ್ಟಡ,ಬಣ್ಣ ಮಾಸಿರುವ ಗೋಡೆ, ತೆಗ್ಗು ಗುಂಡಿ ನೆಲ,ಬಳಪ ಮೂಡದ ಬೋರ್ಡು ಗಳು ದೂರದಿಂದ ನೋಡಿದರೆ ಭೂತ ಬಂಗಲೆಯಂತೆ ಕಾಣು ತ್ತಿವೆ.ಶಾಲೆಯ ಮೂರು ಕೊಠಡಿಗಳು ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವ ಸಮಯದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿವೆ.

ಇ‌ನ್ನೂ ಗ್ರಾಮದಲ್ಲಿ ಹೆಚ್ಚುವರಿ ಕೊಠಡಿಗಳಿದ್ದರೂ ಕೂಡಾ ಮಕ್ಕಳಿಗೆ ಅನುಗುಣವಾಗಿಲ್ಲ.186 ಮಕ್ಕಳಿಗೆ ಕೇವಲ ನಾಲ್ಕು ಹೆಚ್ಚುವರಿ ಕಟ್ಟಡಗಳಿವೆ.ಮಕ್ಕಳಿಗೆ ಶುದ್ಧ ಕುಡಿ ಯುವ ನೀರು,ಡೆಸ್ಕ್,ಫ್ರೀಡಂ ಸಾಮಾಗ್ರಿಗಳು ಕಂಪ್ಯೂಟರ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿಲ್ಲ.ಈಚೆಗೆ ಸುರಿದ ಮಳೆಯಿಂದಾಗಿ ಕಟ್ಟಡಗಳೆಲ್ಲವೂ ನೀರಿನಲ್ಲಿ ನೆನೆದು ಹೋಗಿವೆ.ತಾತ್ಕಾಲಿಕವಾಗಿ ಲಭ್ಯವಿರುವ ಕೊಠಡಿ ಗಳಲ್ಲಿ ತರಗತಿಗಳು ನಡೆಸಿಕೊಂಡು ಹೋಗಬೇಕಾಗಿದೆ. ಇನ್ನೂ ಸರ್ಕಾರಿ ಶಾಲೆಯ ಕಟ್ಟಡಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿವೆ.ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು.ಕೂಡಲೇ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯಗ ಳನ್ನು ಒದಗಿಸಿಕೊಡಬೇಕು ಎಂಬುದು ಪೋಷಕರ ಆಗ್ರಹ ವಾಗಿದ್ದು ಇಲಾಖೆಯ ಅಧಿಕಾರಿಗಳು ಸರ್ಕಾರ ಸ್ಪಂದಿಸುತ್ತ ದೆನಾ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.