ರಾಜ್ಯದ ಶಿಕ್ಷಕರಿಗೆ ಶಾಕ್ ನೀಡಿದ ಇಲಾಖೆ – ಶಾಕ್ ಮೇಲೆ ಶಾಕ್ ನೀಡುತ್ತಿದ್ದರು ಮನವಿಗೆ ಮಾತ್ರ ಸೀಮಿತವಾದ ಸಂಘಟನೆಯ ನಾಯಕರು…..

Suddi Sante Desk

ಬೆಂಗಳೂರು –

ಈಗಾಗಲೇ ವರ್ಗಾವಣೆ ಸಿಗದೇ ಪರದಾಡುತ್ತಿರುವ ರಾಜ್ಯದ ಶಿಕ್ಷಕರಿಗೆ ಶಿಕ್ಣ ಇಲಾಖೆ ಮತ್ತೊಂದು ದೊಡ್ಡ ಪ್ರಮಾಣದ ಶಾಕಿಂಗ್ ನೀಡಿದೆ‌.ಹೌದು ಸಾಮಾನ್ಯವಾಗಿ ಇದುವರೆಗೆ ಶಿಕ್ಷಕರ ಬಡ್ತಿಯನ್ನು ಸೇವಾ ಅನುಭವದ ಆಧಾರದ ಮೇಲೆ ನೀಡಲಾಗುತ್ತಿತ್ತು ಆದರೆ ಈ ಕ್ರಮಕ್ಕೆ ಇಲಾಖೆ ಸಧ್ಯ ಬ್ರೇಕ್ ಹಾಕಿ ಹೊಸದೊಂದು ಆದೇಶ ವನ್ನು ಮಾಡಿದೆ‌.ಹೌದು ಶಿಕ್ಷಣ ಇಲಾಖೆಯಲ್ಲಿ ಇನ್ಮುಂದೆ ಸ್ಪರ್ಧಾ ತ್ಮಕ ಪರೀಕ್ಷೆಯ ಮೂಲಕ ಶಿಕ್ಷಕರ ಬಡ್ತಿಗೆ ಆದೇಶಿಸಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಬಿಡುಗಡೆ ಮಾಡಿದ್ದು ಕಡ್ಡಾಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 6 ರಿಂದ 8ನೇ ತರಗತಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ

ಅಂದ ಹಾಗೇ ಪದವಿಯನ್ನು ಪೂರೈಸಿದ 75 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿಯ ನಿರೀಕ್ಷೆಯಲ್ಲಿ ದ್ದು ಈ ಶಿಕ್ಷಕರನ್ನು 6 ರಿಂದ 8ನೇ ತರಗತಿಗೆ ನೇಮಿಸಿ ಕೊಳ್ಳ ಬೇಕು ಎನ್ನುವ ಕೂಗು ಕೇಳಿ ಬಂದಿದೆ.ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಶಿಕ್ಷಕರ ಬಡ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ಕಡ್ಡಾಯಗೊಳಿಸಿದ್ದು ದೊಡ್ಡ ತಲೆನೋವು ತಂದಿಟ್ಟಿದ್ದು ಮೇಲಿಂದ ಮೇಲೆ ಇಂಥಹ ಮಾರಕವಾದ ಆದೇಶಗಳು ಬರುತ್ತಿದ್ದರು ಕೂಡಾ ಇಲಾಖೆಯ ವಿರುದ್ಧ ಧ್ವನಿ ಎತ್ತದೇ ಕೇವಲ ಮನವಿಗೆ ಮಾತ್ರ ಸಿಮೀತವಾಗಿದ್ದಾರೆ ಸಂಘಟನೆಯ ನಾಯಕರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.