ಇಂದೇ CM ಭೇಟಿಯಾಗಲಿರುವ ಶಿಕ್ಷಕರು – ಕೆಲವೊಂದಿಷ್ಟು ಬೇಡಿಕೆಗಳ ಈಡೇರಿಕೆಗೆ ಭೇಟಿಯಾಗಲಿರುವ ನಿಯೋಗ…..

Suddi Sante Desk

ವಿಜಯಪುರ –

ರಾಜ್ಯದಲ್ಲಿ ಶಿಕ್ಷಕರ ಕೆಲ ಪ್ರಮುಖ ಬೇಡಿಕೆಗಳ ಕುರಿತು ಇಂದು ಮುಖ್ಯಮಂತ್ರಿಗಳನ್ನು ಶಿಕ್ಷಕರು ಭೇಟಿಯಾಗಲಿ ದ್ದಾರೆ‌.ಹೌದು ಬೇಡಿಕೆಗಾಗಿ ಭೇಟಿಯಾಗಿ ಮನವಿಯನ್ನು ಸಲ್ಲಿಸಲು ಮುಂದಾಗಿದ್ದು ಇಂದು ವಿಜಯಪುರ ಗೆ ಬರಲಿ ರುವ ಮುಖ್ಯಮಂತ್ರಿ ಅವರನ್ನು ವಿಜಯಪುರ ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪದಾಧಿಕಾರಿಗಳು ನಿರ್ಧಾರವನ್ನು ಕೈಗೊಂಡಿ ದ್ದಾರೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಜಿಲ್ಲೆಯ ಎಲ್ಲಾ ಹಂತದ ಪದಾಧಿಕಾರಿ ಗಳು,ಪ್ರತಿನಿಧಿಗಳು ಹಾಗೂ ನೌಕರರಲ್ಲಿ ವಿನಂತಿಸಿಕೊಳ್ಳು ವುದೇನೆಂದರೆ ಮಾನ್ಯ ಮುಖ್ಯಮಂತ್ರಿಗಳು ಇಂದು ಜಿಲ್ಲೆಗೆ ಆಗಮಿಸುತ್ತಿದ್ದು ಕಾರಣ ರಾಜ್ಯ ಸಂಘದ ನಿರ್ದೇಶನದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ,ಮಂತ್ರಿಗಳಿಗೆ ಹಾಗೂ ಸಂಸ ದರಿಗೆ,ಶಾಸಕರಿಗೆ,ವಿಧಾನ ಪರಿಷತ್ ಸದಸ್ಯರಿಗೆ ಬೇಡಿಕೆ ಗಳನ್ನು ಕುರಿತು ಮನವಿ ಸಲ್ಲಿಸುತ್ತಿದ್ದಾರೆ.

ದಿನಾಂಕ 25-12- 2020 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆ ಹತ್ತಿರ ಬರಲು ಸಂಘದ ಸದಸ್ಯರು ವಿನಂತಿ ಮಾಡಿ ಕೊಂಡಿದ್ದಾರೆ

ಪ್ರಮುಖ ಬೇಡಿಕೆಗಳು
೧) ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಯನ್ನು ಜಾರಿಗೊಳಿಸುವುದು
೨) ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹ
೩) ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಬಗ್ಗೆ
೪) ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳ ಬಗ್ಗೆ.

ನೌಕರರ ಹಿತ ಕಾಪಾಡಿ ನ್ಯಾಯಯುತ ಬೇಡಿಕೆಗಳನ್ನು ಪಡೆಯುವುದೇ ನಮ್ಮ ಸಂಘದ ಪರಮೋಚ್ಚ ಗುರಿ

ಇಂದ
ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ವಿಜಯಪುರ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.