ಮುಖ್ಯಶಿಕ್ಷಕ ಬಂಧನ ಮಹಮ್ಮದ್ ಇಕ್ಬಾಲ್ ಅವಟಿ ಅವರನ್ನು ಬಂಧನ ಮಾಡಿ ವಿಚಾರಣೆ ಮಾಡುತ್ತಿರುವ ಪೊಲೀಸರು…..

Suddi Sante Desk

ತುಮಕೂರು –

ವಿದ್ಯಾರ್ಥಿನಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮುಖ್ಯ ಶಿಕ್ಷಕರೊಬ್ಬರನ್ನು ಬಂಧನ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.ತುಮಕೂರಿನ ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ ಬಂಧಿತರಾಗಿದ್ದಾರೆ.

2 ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ನೆಪದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದ ಇವರು 50 ರೂಪಾಯಿ ಕೊಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದರಂತೆ ಈ ಕುರಿತು ನೊಂದ ವಿದ್ಯಾರ್ಥಿನಿ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಳು.ವಿದ್ಯಾರ್ಥಿನಿಯ ಮಾಹಿತಿ ಹಿನ್ನೆಲೆ ಯಲ್ಲಿ ಪಾಲಕರು ಶಿರಾ ಠಾಣೆಯಲ್ಲಿ ಡಿಸೆಂಬರ್ 21 ರಂದು ದೂರು ದಾಖಲಿಸಿದ್ದರು.

ದೂರು ದಾಖಲಾದ ನಂತರ ಪೊಲೀಸರು ಇವರನ್ನು ಬಂಧನ ಮಾಡಿದ್ದಾರೆ.ಕಳೆದ ಐದಾರು ತಿಂಗಳಿಂದ ಮಹಮ್ಮದ್ ಇಕ್ಬಾಲ್ ಅವಟಿ ಶಾಲೆಯಲ್ಲಿ ಅನುಚಿತ ವರ್ತನೆ, ಅಶ್ಲೀಲ ಆವಭಾವ ಮಾಡುತಿದ್ದರಂತೆ. ವಿನಾಕಾ ರಣ ವಿದ್ಯಾರ್ಥಿನಿಯರ ಮೈಮುಟ್ಟುತಿದ್ದ ಎಂದು ಆರೋಪ ಕೇಳಿಬಂದಿದೆ.

ಓರ್ವ ವಿದ್ಯಾರ್ಥಿನಿಯ ಪೋಷಕರು ಶಿರಾ ಠಾಣೆಗೆ ದೂರು ಕೊಟ್ಟ‌ ಹಿನ್ನೆಲೆ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಸಧ್ಯ ತುಮಕೂರು ವಿಶೇಷ ನ್ಯಾಯಾಲ ಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ತಗೆದುಕೊಂಡಿರುವ ಶೀರಾ ಪೊಲೀಸರು ವಿಚಾರಣೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.