ಮುಖ್ಯಶಿಕ್ಷಕ ಅಮಾನತು ಮಹಮ್ಮದ್ ಇಕ್ಬಾಲ್ ಅವಟಿ ಅವರನ್ನು DDPI ಅಮಾನತು ಮಾಡಿ ಆದೇಶ…..

Suddi Sante Desk

ತುಮಕೂರು –

ವಿದ್ಯಾರ್ಥಿನಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮುಖ್ಯಶಿಕ್ಷಕರೊಬ್ಬರನ್ನು ಈಗಾಗಲೇ ಬಂಧನ ಮಾಡಿ ಪೊಲೀಸರು ವಿಚಾರಣೆ ಮಾಡತಾ ಇದ್ದಾರೆ ಹೌದು ತುಮಕೂರಿನ ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ ಅವರ ಈ ಒಂದು ಆರೋಪ ಬಂದಿದ್ದು ಈಗಾಗಲೇ ಇವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡತಾ ಇದ್ದಾರೆ. ಇದರ ನಡುವೆ ಇವರನ್ನು ಅತ್ತ ಆರೋಪ ಕೇಳಿಬರುತ್ತಿದ್ದಂತೆ ಕೆಲಸದಿಂದ ಅಮಾನತು ಮಾಡಿ ಆದೇಶವನ್ನು ಮಾಡಲಾಗಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರು ಈ ಒಂದು ಆದೇಶವನ್ನು ಮಾಡಿದ್ದಾರೆ.ಶಿಕ್ಷಕನನ್ನು ಈಗಾಗಲೇ ತುಮ ಕೂರು ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು ವಿಚಾರಣೆ ಮಾಡತಾ ಇದ್ದಾರೆ ಪೊಲೀ ಸರು ಇತ್ತ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಗೊಳಿಸಿ ಡಿಡಿಪಿಐ ಕೃಷ್ಣಮೂರ್ತಿ ಅವರು.2 ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ನೆಪದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದ ಇವರು 50 ರೂಪಾಯಿ ಕೊಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದರಂತೆ ಈ ಕುರಿತು ನೊಂದ ವಿದ್ಯಾರ್ಥಿನಿ ಪಾಲಕರ ಬಳಿ ಅಳಲು ತೋಡಿಕೊಂಡ ನಂತರ ವಿದ್ಯಾರ್ಥಿನಿಯ ಮಾಹಿತಿ ಹಿನ್ನೆಲೆಯಲ್ಲಿ ಪಾಲಕರು ಶಿರಾ ಠಾಣೆಯಲ್ಲಿ ಡಿಸೆಂಬರ್ 21 ರಂದು ದೂರು ದಾಖಲಿಸಿದ್ದರು.ದೂರು ದಾಖಲಾದ ನಂತರ ಪೊಲೀಸರು ಇವರನ್ನು ಬಂಧನ ಶಾಲೆಯಲ್ಲಿ ಅನುಚಿತ ವರ್ತನೆ, ಅಶ್ಲೀಲ ಆವಭಾವ ಮಾಡುತಿದ್ದರಂತೆ.ವಿನಾಕಾರಣ ವಿದ್ಯಾರ್ಥಿನಿಯರ ಮೈಮುಟ್ಟುತಿದ್ದ ಎಂದು ಆರೋಪ ಕೇಳಿಬಂದಿದೆ. ಓರ್ವ ವಿದ್ಯಾರ್ಥಿನಿಯ ಪೋಷಕರು ಶಿರಾ ಠಾಣೆಗೆ ದೂರು ಕೊಟ್ಟ‌ ಹಿನ್ನೆಲೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ.ಸಧ್ಯ ತುಮಕೂರು ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು ಹೆಚ್ಚಿನ ವಿಚಾರ ಣೆಗಾಗಿ ಪೊಲೀಸರು ವಶಕ್ಕೆ ತಗೆದುಕೊಂಡಿರುವ ಶೀರಾ ಪೊಲೀಸರು ವಿಚಾರಣೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.