ಬಿಸಿಯೂಟ ದಲ್ಲಿ ಇನ್ನೂ ಮುಂದೆ ಉಪ್ಪಿನಕಾಯಿ – ಶೀಘ್ರದಲ್ಲೇ ನಿರ್ಧಾರವಾಗಲಿದೆ ನೂತನ ಪ್ಲಾನ್

Suddi Sante Desk

ವಿಜಯಪುರ –

ಇನ್ನೂ ಮುಂದೆ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ವಿದ್ಯಾರ್ಥಿಗಳಿಗೆ ನಿಂಬೆಕಾಯಿ ಉಪ್ಪಿನಕಾಯಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಒಂದು ವಿಚಾರ ಕುರಿತು ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಂಬೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ವಿದ್ಯಾರ್ಥಿ ಗಳಿಗೆ ನಿಂಬೆ ಉಪ್ಪಿನಕಾಯಿ ನೀಡುವ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣ ವಾಗಿ ಜೋಳ ಮತ್ತು ರಾಗಿ ಸಂಗ್ರಹವಾಗಿಲ್ಲ ಅಕ್ಕಿಯನ್ನು ಮಾತ್ರ ವಿತರಿಸು ತ್ತಿದ್ದು ಮುಂದಿನ ದಿನಗಳಲ್ಲಿ ಎಂ.ಎಸ್.ಪಿ. ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.