ಹೊಸ ತಿರುವು ಪಡೆದುಕೊಂಡ ಹುಬ್ಬಳ್ಳಿಯಲ್ಲಿನ ಪೊಲೀಸ್ ಕಾನ್ಸ್ಟೇಬಲ್ ಮೇಲೆ ನಡೆದ ಹಲ್ಲೆ ಪ್ರಕರಣ – ಪೊಲೀಸಪ್ಪನಿಂದಲೇ ಪಕ್ಕದ ಮನೆಯವರ ಮೇಲೆ ಹಲ್ಲೆಯಂತೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ನಡೆದ ಹೆಡ್ ಕಾನ್ಸ್ಟೇಬಲ್ ರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂ ಡಿದೆ.ಹೌದು ಹೆಡ್ ಕಾನ್ಸ್ಟೇಬಲ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪೊಲೀಸಪ್ಪನಿಂದಲೇ ಪಕ್ಕದ ಮನೆಯವರ ಮೇಲೆ ಹಲ್ಲೆಯಾಗಿದೆಯಂತೆ ಇದನ್ನು ಪಕ್ಕದ ಮನೆಯ ಕುಟುಂಬದವರು ಹೇಳಿದ್ದಾರೆ.ಕಾನ್ಸ್ ಟೇಬಲ್ ಮತ್ತು ಪಕ್ಕದ ಮನೆಯವರ ನಡುವೆ ಮಾರಾಮಾರಿನಲ್ಲಿ ನೀರಿನ ವಿಷಯಕ್ಕೆ ಎರಡು ಕುಟುಂಬದ ನಡುವೆ ಜಗಳ ವಾಗಿದೆ.ಈ ಒಂದು ಜಗಳ ತಾರಕಕ್ಕೇರಿ ಎರಡು ಕುಟುಂಬ ಗಳ ನಡುವೆ ಮಾರಾಮಾರಿಯಾಗಿದೆಯಂತೆ.

ಇಟ್ಟಿಗೆ ಮತ್ತು ರಾಡ್ ನಿಂದ ಬಡಿದಾಡಿಕೊಂಡು ಎರಡು ಕುಟುಂಬದವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೊದಲು ಪೊಲೀಸಪ್ಪನಿಂದ ಗಂಭೀರ ಹಲ್ಲೆಯಾಗಿದೆ ಎಂದು ಭರತೇಶ್ ಕುಟುಂಬಸ್ಥರ ಆರೋಪವನ್ನು ಮಾಡಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಭರತೇಶ್ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅತ್ತ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದಾರೆ ಹೆಡ್ ಕಾನ್ಸ್ ಟೇಬಲ್ ಪುರಾಣಿಕಮಠ ಮೊದಲು ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ ಎನ್ನಲಾಗಿತ್ತು ಆದರೆ ಈಗ ಈ ಒಂದು ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ.ಗಲಾಟೆ ತಡೆಯಲು ಹೋಗಿದ್ದ ಪುರಾಣಿಕಮಠ ರ ಮೇಲೆ ಹಲ್ಲೆಯಾಗಿದೆ ಎನ್ನಲಾಗಿತ್ತು ಆದರೆ ಈಗ ಇವರೇ ನಮ್ಮ ಮೇಲೆ ಮೊದಲು ಹಲ್ಲೆಯನ್ನು ಮಾಡಿದ್ದಾರೆ ಎಂದು ಭರತೇಶ ಮತ್ತು ಕುಟುಂಬದವರು ಹೇಳಿದ್ದಾರೆ.

ಹಳೇಹುಬ್ಬಳ್ಳಿಯ ಆರ್ ಎನ್.ಶೆಟ್ಟಿ ರಸ್ತೆಯ ಸಹದೇವ ನಗರದಲ್ಲಿ ಘಟನೆ ನಡೆದಿದೆ.ಘಟನೆಯಲ್ಲಿ ಉತ್ತರ ಸಂಚಾರ ಠಾಣೆಯ ಪರ್ವತಯ್ಯ ಜಿ. ಪುರಾಣಿಮಠ ಗಾಯಗೊಂಡಿದ್ದು ಇತ್ತ ಭರತೇಶ ಕುಟಂಬದವರು ಕೂಡಾ ಗಾಯಗೊಂಡಿದ್ದಾರೆ.ನೀರಿನ ವಿಷಯವಾಗಿ ಪಕ್ಕದ ಮನೆ ಮಹಿಳೆಯರು ಜಗಳ ಮಾಡುತ್ತಿದ್ದಾಗ ಅವರನ್ನು ಸಮಾ ಧಾನಪಡಿಸಲು ಪುರಾಣಿಮಠರು ಮುಂದಾದಾಗ ಪರಸ್ಪ ರರ ನಡುವೆ ಮಾತಿನ ಚಕಮಕಿ ನಡೆದಿದೆ.ಇದು ವಿಕೋಪಕ್ಕೆ ಹೋಗುತ್ತಿದ್ದಂತೆ ಭರತೇಶ ಎಂಬಾತನು ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸದ್ಯ ಗೋಕುಲ ರಸ್ತೆಯ ಡಾಲರ್ಸ್ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಎಸ್‌ಐ ಪುರಾಣಿಮಠ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಈಗ ಈ ಒಂದು ಪ್ರಕರಣ ಹೊಸ ತಿರುವು ಪಡೆದುಕೊಂ ಡಿದ್ದು ಈ ಕುರಿತಂತೆ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.