ಧಾರವಾಡದ ಪೃಥ್ವಿ ಹೊಟೇಲ್ ಮುಂದೆ ಕಾರು ಅಪಘಾತ ಚರಂಡಿ ಗೆ ಉರುಳಿ ಬಿದ್ದ ಕಾರು ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ…..

Suddi Sante Desk

ಬೆಂಗಳೂರು –

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಚರಂಡಿ ಗೆ ಬಿದ್ದ ಘಟನೆ ಧಾರವಾಡ ದಲ್ಲಿ ನಡೆದಿದೆ.ಹೌದು ನಗರದ ಕಲಘಟಗಿ ರಸ್ತೆಯ ಪೃಥ್ವಿ ಹೊಟೇಲ್ ಮುಂದೆ ಈ ಒಂದು ಅಪಘಾತ ಸಂಭವಿಸಿದೆ.ಕಾರು ಸಂಪೂರ್ಣವಾಗಿ ರಸ್ತೆ ಪಕ್ಕ ದಲ್ಲಿನ ತಗ್ಗಿಗೆ ಬಿದ್ದಿದ್ದು ಕಾರಿನಲ್ಲಿ ಐವರು ಪ್ರಯಾಣಿ ಸುತ್ತಿದ್ದರು.

ಇನ್ನೂ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಪ್ರಮಾಣ ದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಯಿತು ಇತ್ತ ಈ ಒಂದು ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ಎಎಸ್ ಐ ವಿರೇಶ ಬಳ್ಳಾರಿ ಮತ್ತು ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನಲ್ಲಿದ್ದವರಿಗೆ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದು ನಿಖರವಾದ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.