ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಪ್ರವೃತ್ತಿ 20 ಕ್ಕೂ ಹೆಚ್ಚು ಶಾಲೆಗಳ ಮಾಲೀಕ ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿ ಇಕ್ಕಟ್ಟಿಗೆ ಸಿಲುಕಿಕೊಂಡ ಶಿಕ್ಷಕ…..

Suddi Sante Desk

ಗ್ವಾಲಿಯರ್(ಮಧ್ಯಪ್ರದೇಶ) –

ಸರ್ಕಾರಿ ಶಾಲೆಯ ಶಿಕ್ಷಕರು ಬಡವರು ಎಂಬ ಮಾತಿದೆ ಆದರೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿರುವ ಈ ಶಿಕ್ಷಕ ಮಾತ್ರ ಇದಕ್ಕೆ ತದ್ವಿರುದ್ಧ ಸರ್ಕಾರಿ ಶಾಲೆಯ ಶಿಕ್ಷಕನಾದರೂ ಈತನೇ 20 ಕಾಲೇಜುಗಳ ಒಡೆಯನಾಗಿದ್ದಾನೆ ಅಲ್ಲದೇ ಆದಾಯಕ್ಕಿಂತ ಸಾವಿರ ಪಟ್ಟು ಹೆಚ್ಚು ಆಸ್ತಿ ಹೊಂದಿದ್ದಾನೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಈ ವಿಷಯ ಬಹಿರಂಗವಾಗಿದೆ ಅಲ್ಲದೇ ಶಿಕ್ಷಕನ ಆಸ್ತಿಯನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಗ್ವಾಲಿಯರ್ ನಿವಾಸಿಯಾದ ಈ ಶಿಕ್ಷಕನ ಹೆಸರು ಪ್ರಶಾಂತ್ ಪರ್ಮಾರ್. ಘಾಟಿಗಾಂವ್ ಎಂಬಲ್ಲಿನ ಪ್ರಾಥಮಿಕ ಶಾಲೆ ಯ ಶಿಕ್ಷಕರಾಗಿರುವ ಇವರ ವಿರುದ್ಧ ಅಕ್ರಮ ಆಸ್ತಿ ಸಂಪಾ ದನೆ ಆರೋಪ ಕೇಳಿಬಂದ ಹಿನ್ನೆಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಶಿಕ್ಷಕನ ಸಂಪಾದನೆಗಿಂತ 1 ಸಾವಿರ ಪಟ್ಟು ಹೆಚ್ಚು ಆಸ್ತಿ ಕಂಡು ಬಂದಿದೆ.ಈ ಶಿಕ್ಷಕ 20 ಕಾಲೇಜುಗಳ ಮಾಲೀಕ: ಈ ಶಿಕ್ಷಕನ ಚಮತ್ಕಾರ ಎಂದರೆ ಯಾವುದೋ ಸಣ್ಣ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ಮಾಡುತ್ತಿ ದ್ದರೂ ಈತ ತನ್ನ ಒಡೆತನದ 20 ಕಾಲೇಜುಗಳನ್ನು ನಡೆಸುತ್ತಿದ್ದಾನಂತೆ.

ಇದರಲ್ಲಿ ಡಿ.ಇಡಿ, ಬಿ.ಇಡಿ ಶಿಕ್ಷಣವನ್ನು ಕಲಿಸುವ ಕಾಲೇಜು ಗಳೂ ಇವೆ.ವರ್ಷಕ್ಕೆ ಈತ 25 ರಿಂದ 30 ಲಕ್ಷ ವೇತನ ಪಡೆಯುತ್ತಾನೆ. ಆದರೆ, ಅಧಿಕಾರಿಗಳ ದಾಳಿಯ ವೇಳೆ ಈತನಲ್ಲಿ ವೇತನಕ್ಕಿಂತಲೂ 1 ಸಾವಿರ ಪಟ್ಟು ಅಧಿಕ ಆಸ್ತಿ ಪತ್ತೆಯಾಗಿದೆ. ಇದಲ್ಲದೇ, ತೋಟದಲ್ಲಿ ಕಲ್ಯಾಣ ಮಂಟಪ, ಶಾಲೆ ಕೂಡ ನಡೆಸುತ್ತಿದ್ದಾನಂತೆ ಈ ಕುಬೇರ ಶಿಕ್ಷಕ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.