ಬೆಂಗಳೂರು –
ಮಹಾಮಾರಿ ಕರೋನಾ ಆಕ್ರಂದನ ದಿನದಿಂದ ದಿನ ಕ್ಕೆ ರಾಜ್ಯದಲ್ಲೂ ಕೂಡಾ ಹೆಚ್ಚಾಗುತ್ತಿದೆ.ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಜನತಾ ಕಫ್ಯೂ ಜಾರಿಗೆ ಮಾಡಿದ್ದರು ಕೂಡಾ ಕಡಿಮೆಯಾಗುವ ಬದಲಿಗೆ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹಾಗೇ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ.ಇವೆಲ್ಲದರ ನಡುವೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸಧ್ಯ ಮನೆಯಲ್ಲಿ ಲಾಕ್ ಆಗಿದ್ದಾರೆ.ಹಾಗಾದರೆ ರಾಜ್ಯಾಧ್ಯ ಕ್ಷರು ಮನೆಯಲ್ಲಿ ಏನು ಮಾಡತಾ ಇದ್ದಾರೆ.ಒಂದು ಸಂಘದ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಮನೆಯ ಲ್ಲಿ ಕುಳಿತುಕೊಂಡು ಏನು ಮಾಡ್ತಾ ಇದ್ದಾರೆ ಹೌದು ಹುಬ್ಬಳ್ಳಿಯ ಸುದ್ದಿ ಸಂತೆ ಯ ವರದಿಗಾರ ಯಶವಂ ತ ಡೋಣೂರ ಈ ಕುರಿತಂತೆ ಸಂಘದ ರಾಜ್ಯಾಧ್ಯಕ್ಷ ರನ್ನು ಪ್ರಶ್ನಿಸಿದ್ದು ಸಂದರ್ಶನದ ವಿವರ ಈ ಕೆಳಗಿನಂ ತಿದೆ.

ಪ್ರಶ್ನೆ – ಕೋವಿಡ್ ಹಿನ್ನಲೆಯಲ್ಲಿ ತಾವೊಬ್ಬರು ಒಂದು ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಸಧ್ಯ ಏನು ಮಾಡತಾ ಇದ್ದೀರಾ
ಅಶೋಕ ಸಜ್ಜನ ಮಾತು – ಪ್ರತಿದಿನ 20 ರಿಂದ 30 ಜನ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಯೋಗ ಕ್ಷೇಮ ವಿಚಾರಿಸುತ್ತಾ ಜಾಗೃತಿ ಮೂಡಿಸಲಾಗುತ್ತಿದೆ. ಇದ್ದೆನೆ
ಪ್ರಶ್ನೆ – ಕೋವಿಡ್ ಸೋಂಕಿತರ ಕುರಿತಂತೆ ಸಂಘದ ಕಾರ್ಯವೇನು
ಅಶೋಕ ಸಜ್ಜನ ಮಾತು – ಪರಿಚಯವಿರುವ ನೆರೆಹೊರೆಯವರು ಮತ್ತು ಬಂಧುಬಾಂಧವರು ವೃತ್ತಿ ಬಾಂಧವರು ಇವರುಗಳಿಗೆ ಕೋವಿಡ್ ಸೋಂಕು ಆಗಿರುವುದನ್ನು ಖಚಿತಪಡಿಸಿಕೊಂಡು ಅವರೊಂದಿಗೆ ಮಾತನಾಡಿ ಸೋಂಕಿತರೊಂದಿಗೂ ಮಾತನಾಡಿ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಂಘದಿಂದ ರಾಜ್ಯಾಧ್ಯಕ್ಷ ನಾಗಿ ಮಾಡಲಾಗುತ್ತಿದೆ

ಪ್ರಶ್ನೆ– ಕೋವಿಡ್ ನಿಂದ ನಿಧನರಾದವರ ಶಿಕ್ಷಕರ ಕುರಿತಂತೆ ಯಾವ ಕ್ರಮವನ್ನು ಸಂಘದಿಂದ ಕೈಗೊಂಡಿದ್ದಿರಿ
ಅಶೋಕ ಸಜ್ಜನ ಮಾತು –
ರಾಜ್ಯದ ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕ ಮಾಡಿ ಮೃತ ಪಟ್ಟ ಶಿಕ್ಷಕರ ಮಾಹಿತಿಯನ್ನು ಕಲೆಹಾಕಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ
ಪ್ರಶ್ನೆ –ಶಿಕ್ಷಕರಿಗಾಗಿ ಮತ್ತೆ ಯಾವ ಕಾರ್ಯಕ್ರಮ ಸಂಘದಿಂದ ರೂಪಿಸಿದ್ದಿರಿ
ಅಶೋಕ ಸಜ್ಜನ ಮಾತು – ಕಳೆದ 20 ದಿನಗಳಿಂದ ಜಾಗೃತಿ ಅಭಿಯಾನ ಕಾರ್ಯಕ್ರಮ ಮಾಡತಾ ಇದ್ದೇವಿ

ಪ್ರಶ್ನೆ – ಕೋವಿಡ್ ಕುರಿತಂತೆ ನಿಮ್ಮ ಸೇವೆ ಏನು
ಅಶೋಕ ಸಜ್ಜನ ಮಾತು – ಕೋವಿಡ್ ಕೇರ್ ಎಂಬ ಹೆಸರಿನಲ್ಲಿ ಎರಡು ವಾಟ್ಸ್ ಆಪ್ ಗ್ರೂಪ್ ಗಳನ್ನು ಮಾಡಿ ಅಲ್ಲಿ ಅಧಿಕೃತ ಮಾಹಿತಿಯನ್ನು ಹಾಗೇ ಸಲಹೆ ಸೂಚನೆ ಇದರೊಂದಿಗೆ ಯಾರಿಗಾದರೂ ಸಹಾಯ ಬೇಕಾದರೆ ಅದನ್ನು ರಾಜ್ಯಾಧ್ಯಕ್ಷರಾಗಿ ಮಾಡಲಾಗುತ್ತಿದೆ.
ಪ್ರಶ್ನೆ – ನಿಮ್ಮೊಂದಿಗೆ ನಮ್ಮ ತಂಡದ ಕಾರ್ಯವೇನು
ಅಶೋಕ ಸಜ್ಜನ ಮಾತು ರಾಜ್ಯದ 34 ಜಿಲ್ಲೆಗಳಲ್ಲ ರಾಜ್ಯ ಜಿಲ್ಲೆ ತಾಲ್ಲೂಕು ಹಂತದ ಪದಾಧಿಕಾರಿಗಳು ನಮ್ಮ ಜಾಗೃತಿ ಅಭಿಯಾನವನ್ನು ಯಶಶ್ವಿಗೊಳಿಸಲು ಶ್ರಮಿಸುತ್ತಿದ್ದಾರೆ.
ವರದಿ ಯಶವಂತ ಡೋಣೂರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಡೆಸ್ಕ್
ಪೊಟೊ ಸಮೀರ್