ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ರೈತರ ಹೊಲಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ದರು.ಹೌದು ನಿನ್ನೆ ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಡಿಕೆ ಶಿವಕುಮಾರ್ ಇಂದು ಜಿಲ್ಲೆಯ ಲ್ಲಿ ಪ್ರವಾಸ ಮುಂದುವರಿದಿದ್ದು ಜಿಲ್ಲೆಯ ರಾಯಪು ರ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿದರು
ಹೌದು ಕೊರೋನಾ ಕಾರಣಕ್ಕೆ ರೈತರು ಬೆಳೆದ ಬೆಳೆ ಗಳು ಮಾರಾಟ ಮಾಡಲು ಆಗುತ್ತಿಲ್ಲ ಎಂದು ಅಳ ಲು ತೋಡಿಕೊಂಡಿದ್ದಾರೆ ರೈತರು.ಹೀಗಾಗಿ ರೈತರ ಹೊಲದಲ್ಲಿ ಕೂತು ರೈತರ ಸಮಸ್ಯೆ ಆಲಿಸಿದರು ಕೆಪಿ ಸಿಸಿ ಅಧ್ಯಕ್ಷ ಡಿಕೆಶಿ ಅವರು.
ಮೆಣಸಿನಕಾಯಿ, ಟಮೋಟೋ, ಗಜ್ಜರಿ, ಬಿಟ್ರೂಟ್ ಕಿತ್ತು ತಂದಿದ್ದು ರೈತರು ಇವುಗಳನ್ನು ನೋಡಿ ನಂತರ ರೈತರಿಂದ ಸಮಸ್ಯೆ ಸಂಕಷ್ಟವನ್ನು ಆಲಿಸಿದರು. ನಾವು ಬೆಳೆದ ತರಕಾರಿ ಮಾರಾಟ ಮಾಡಲು ಪೊಲೀಸರು ಬಿಡುತ್ತಿಲ್ಲ ಎಂದು ರೈತರು ಆರೋಪ ವನ್ನು ಮಾಡಿ ಹೇಳಿದರು.ಮೆಣಸಿನಕಾಯಿ ನಲವ ತ್ತು ರೂಪಾಯಿ ಇದ್ದ ಬೆಲೆ ಈಗ ಒಂದು ರೂಪಾಯಿ ಸಹ ಕೇಳುತ್ತಿಲ್ಲವೆಂದರು.
ಅಷ್ಟೇ ಅಲ್ಲದೆ ಮುಂಗಾರು ಹಂಗಾಮಿಗೆ ಸಮರ್ಪಕ ವಾಗಿ ಬಿತ್ತನೆ ಬೀಜ ವಿತರಣೆ ಆಗುತ್ತಿಲ್ಲ.ಬಿತ್ತನೆ ಬೀಜ ವಿತರಣೆ ಕೇವಲ 5 ಎಕರೆಗೆ ಮಾತ್ರ ನೀಡಲಾಗುತ್ತಿದೆ ಎಂದರು. 8-10 ಎಕರೆ ಜಮೀನು ಹೊಂದಿರುವ ರೈತ ರಿಗೆ ಬಿತ್ತನೆ ಬೀಜದ ಕೊರತೆ ಆಗುತ್ತಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು
ಇನ್ನುಳಿದ ಜಮೀನಿಗೆ ಬಿತ್ತನೆ ಬೀಜ ಎಲ್ಲಿಂದ ತರು ವುದು ಎಂದು ರೈತರು ಪ್ರಶ್ನೆ ಮಾಡಿದರು.ಇನ್ನೂ ರಸಗೊಬ್ಬರ ಸಹ ಸಮರ್ಪಕವಾಗಿ ನೀಡುತ್ತಿಲ್ಲ ಕೇವಲ ಮೂರು ಚೀಲ ಮಾತ್ರ ನೀಡಲಾಗುತ್ತಿದೆ ಎಂದು ಆರೋಪವನ್ನು ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಂದೆ ಸಾಲು ಸಾಲಾಗಿ ಸಮಸ್ಯೆಯನ್ನು ರೈತರು ಹೇಳಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ರೈತರು.ಈ ಒಂದು ಸಮಯದಲ್ಲಿ ಅಧ್ಯಕ್ಷರೊಂದಿಗೆ ಸ್ಥಳೀಯ ಕೈ ಪಕ್ಷದ ಮುಖಂಡರು ನಾಯಕರು ಕಾರ್ಯಕ ರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು