ಮಹಿಳೆಗೆ ಅವಾಜ್ ಹಾಕಿ ಮಹಿಳೆ ಯ ಮೇಲೆ ದೂರು ದಾಖಲಿಸಿ ಮಾಡಿದ ಪೊಲೀಸರು ಶಿಸ್ತಿನ ಪಕ್ಷ ದಲ್ಲಿ ಅ ಶಿಸ್ತಿನ ಶಾಸಕರು…..

Suddi Sante Desk

ಬೆಂಗಳೂರು :

ಸಮಸ್ಯೆಯನ್ನು ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರಿಗೆ ಅವಾಜ್ ಹಾಕಿ ಅವರ ಮೇಲೆ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಅವಾಜ್ ಹಾಕಿದ ಆರೋಪದ ಬೆನ್ನಲ್ಲೇ ಇದೀಗ ಪೊಲೀಸರು ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋ ಪದಡಿ ಮಹಿಳೆ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ

ಬೆಂಗಳೂರಿನಲ್ಲಿ ಮಳೆಯ ಹಿನ್ನೆಲೆ ವರ್ತೂರು ಕೆರೆಯ ಕೋಡಿ ಬಿದ್ದು ಅವಾಂತರ ಸೃಷ್ಟಿಯಾಗಿತ್ತು.ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಅರವಿಂದ್ ಲಿಂಬಾವಳಿ ಭೇಟಿ ನೀಡಿದ್ದರು ಈ ವೇಳೆ ಮಹಿಳೆಯೊಬ್ಬರು ಪತ್ರ ಹಿಡಿದು ಮನವಿ ಸಲ್ಲಿಸಲು ಬಂದಿದ್ದರು.ಈ ವೇಳೆ ಶಾಸಕರು ಮಹಿಳೆಯ ಕೈಯಲ್ಲಿದ್ದ ಪತ್ರ ಪಡೆಯಲು ಮುಂದಾಗ್ತಾರೆ.ಇದರಿಂದ ಕೋಪಗೊಂಡ ಶಾಸಕರು, ಏ ಇವರನ್ನು ಕರ್ಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚಿಸಿದ್ದು ಮಹಿಳೆಯ ಕೈಯಲ್ಲಿದ್ದ ಪತ್ರವನ್ನು ಬಲವಂತವಾಗಿ ಕಸಿದುಕೊಂಡು ಅವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ

ಇದೀಗ ಮಹಿಳೆ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪದಡಿ ಎಫ್ ಐಆರ್ ದಾಖಲಿಸಿದ್ದು, ರೂತ್ ಎಸ್.ಸಗಾಯಿ ಮೇರಿ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.