ಧಾರವಾಡದ ಲಕಮಾಪೂರ ಗ್ರಾಮದಲ್ಲಿ ಆರೋಗ್ಯ ಶಿಬಿರ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದ ಶಾಸಕ ಅಮೃತ ದೇಸಾಯಿ

Suddi Sante Desk

ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಅಮೃತ ದೇಸಾಯಿ ಸಲಹೆ ನೀಡಿದರು.ಧಾರವಾಡದ ಲಕಮಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರಕ್ಲೆ ಚಾಲನೆ ನೀಡಿ ಮಾತನಾಡಿದರು.ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತಾರರಾದ ದಿ.ಪಂಡಿತ್ ದೀನದಯಾಳ್ ಉಪಾಧ್ಯಾಯರ ಅವರ ಜನ್ಮ ದಿನದ ಅಂಗವಾಗಿ ಸೇವಾ ಪ್ರಾಕ್ಷಿಕ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ನಡೆಯಿತು.

ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಅಮೃತ ದೇಸಾಯಿ ಗೆಳಯರ ಬಳಗ ಮತ್ತು ಗ್ರಾಮ ಪಂಚಾಯತ್ ಯಾದವಾಡ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಮಾತನಾಡಿ ಯಾಂತ್ರಿಕ ಜೀವನಕ್ಕೆ ಮಾರು ಹೋಗುತ್ತಿರುವ ಜನರು ತಮ್ಮ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಆರೋಗ್ಯವೇ ಭಾಗ್ಯವಾಗಿದ್ದು ಅದನ್ನು ಉತ್ತಮವಾಗಿಟ್ಟುಕೊಂಡಲ್ಲಿ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದಾಗಿದೆ ಎಂದರು.

ಲಕಮಾಪೂರ ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಹಾಗೂ ದಿ.ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಅರ್ಥಗರ್ಭಿತವಾಗಿ ಆಚರಿಸುವ ನಿಟ್ಟಿನಲ್ಲಿ ಈ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕರಾದ ಅಮೃತ ದೇಸಾಯಿ ಸಲಹೆ ನೀಡಿದರು.

ನಂತರ ಕಲ್ಲಪ್ಪ ಪೂಜಾರ ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ “ಮನ್ ಕಿ ಬಾತ್” ಕಾರ್ಯಕ್ರಮವನ್ನು ಶಾಸಕರಾದ ಅಮೃತ ದೇಸಾಯಿಯವರು ಹಾಗೂ ಬಿಜೆಪಿ ಮುಖಂಡರು,ಕಾರ್ಯಕರ್ತರು ವೀಕ್ಷಣೆ ಮಾಡಿದರು.ಇದೇ ವೇಳೆ ಬಿಜೆಪಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಬಾವುಟ ಹಾರಿಸಿ ದಿ.ಪಂಡಿತ್ ದೀನದಯಾಳ್ ಉಪಾಧ್ಯಾಯರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಬಯಲು ಸೀಮೆ ಪ್ರದೇಶ ಅಭಿವೃಧ್ದಿ ಮಂಡಳಿ ಅಧ್ಯಕ್ಷರಾದ ತವಣಪ್ಪ ಅಷ್ಟಗಿ,ಕೆಎಂಎಫ್ ಅಧ್ಯಕ್ಷರಾದ ಶಂಕರ ಮುಗದ,ಹಿರಿಯರಾದ ಸಂಗನಗೌಡ ರಾಮನಗೌಡರ, ಮಂಡಲ ಅಧ್ಯಕ್ಷರಾದ ರುದ್ರಪ್ಪ ಆರಿವಾಳ,ಪ್ರಧಾನ ಕಾರ್ಯದರ್ಶಿ ಸಂಭಾಜಿ ಜಾಧವ,ಬಿಜೆಪಿ ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಶ್ಯಾಗೋಟಿ,ನಾರಾಯಣ ಮೋರೆ,ಶಿವಾನಂದ ಬೆಂಡಿಗೇರಿ,ಅಶೋಕ ಹುಡೇದ, ಮಂಜುನಾಥ ಮುಮ್ಮಿಗಟ್ಟಿ,ಉಮೇಶ ವಾಲಿಕಾರ,ಉಮೇಶ ಗದ್ದಿಕೇರಿ,ವಿಠ್ಠಲ ಪೂಜಾರ,ರಾಜು ಕಟ್ಟಿಮನಿ,ಸತೀಶ ಶೇಟೋಜಿ,ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.