ರಾಜ್ಯದಲ್ಲಿ ಮತ್ತೊರ್ವ ಸ್ವಾಮಿಜಿ ಆತ್ಮಹತ್ಯೆ ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆ ಹುಟ್ಟಿಕೊಂಡಿವೆ ಹಲವು ಅನುಮಾನಗಳು

Suddi Sante Desk
ರಾಜ್ಯದಲ್ಲಿ ಮತ್ತೊರ್ವ ಸ್ವಾಮಿಜಿ ಆತ್ಮಹತ್ಯೆ ಡೆತ್ ನೊಟ್ ಬರೆದಿಟ್ಟು ಆತ್ಮಹತ್ಯೆ ಹುಟ್ಟಿಕೊಂಡಿವೆ ಹಲವು ಅನುಮಾನಗಳು

ರಾಮನಗರ –

ಹೌದು ರಾಮನಗರ ಜಿಲ್ಲೆಯ ಪುರಾತನ ಮಠ ಗಳಲ್ಲಿ ಒಂದಾದ ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದು ಭಕ್ತರಲ್ಲಿ ಆತಂಕ ಮೂಡಿದೆ ಕಂಚುಗಲ್​ ಬಂಡೇ ಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಶ್ರೀಗಳು ರಾತ್ರಿ ತಂಗಿದ್ದರು.ಆದರೆ ಸೋಮವಾರ ಮುಂಜಾನೆ ಎಂದಿನ ಸಮಯಕ್ಕೆ ಸ್ವಾಮೀಜಿ ಹೊರಗೆ ಬಾರದಿ ದ್ದರಿಂದ ಆತಂಕಗೊಂಡ ಅಲ್ಲಿಯೇ ಇದ್ದ ಕೆಲವು ವಿದ್ಯಾರ್ಥಿಗಳು ಹೋಗಿ ನೋಡಲಾಗಿ ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಡೆತ್​ನೋಟ್ ಪತ್ತೆಯಾಗಿದ್ದು ಮಾಹಿತಿ ಪ್ರಕಾರ ಶ್ರೀಗಳು ಡೆತ್​ನೋಟ್​ ಬರೆದಿಟ್ಟಿದ್ದು ಇದರಲ್ಲಿ ಏನಿದೆ ಎನ್ನುವುದು ಇನ್ನು ಬಹಿರಂಗಗೊಂಡಿಲ್ಲ, ಈ ಪತ್ರ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ ಸ್ಥಳಕ್ಕೆ ಕುದೂರು ಪೊಲೀಸ್​ ಠಾಣೆ ಸಿಪಿಐ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ.ಸ್ವಾಮೀಜಿ ಅವರ ಸಾವಿನ ಸುದ್ದಿ ತಿಳಿಯು ತ್ತಿದ್ದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದಾರೆ. ಭಕ್ತರನ್ನ ನಿಯಂತ್ರಿಸಲು ಪೊಲೀಸರು ಹರಸಾ ಹಸ ಪಟ್ಟರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.