ಹುಬ್ಬಳ್ಳಿ –
ಪ್ರೋ ಎಲ್ ಆರ್ ವೈಧ್ಯನಾಥನ್ ವರದಿ ಅನ್ವಯ ರಾಜ್ಯದಲ್ಲಿನ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ವಿಚಾರ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದರು.

ರಾಜ್ಯ ಉಪಾಧ್ಯಕ್ಷರಾದ ಗಿರೀಶ ನಾಯಕ ಇವರ ನೇತೃತ್ವದಲ್ಲಿ ಸಂಘದ ಇಪ್ಪತ್ತಕ್ಕೂ ಹೆಚ್ಚು ಮುಖಂ ಡರು ಸರ್ವ ಸದಸ್ಯರು ಭೇಟಿಯಾಗಿ ಈ ಒಂದು ವಿಚಾರ ಕುರಿತು ಚರ್ಚೆ ನಡೆಸಿದರು

ಪ್ರೋ ಎಲ್ ಆರ್ ವೈಧ್ಯನಾಥನ್ ವರದಿ ಅನ್ವಯ ರಾಜ್ಯದಲ್ಲಿನ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ವಿಚಾರ ಕುರಿತು ವರದಿ ಸಿದ್ದಗೊಂಡು ಪೈಲ್ ಗೆ ಒಪ್ಪಿಗೆ ಕೂಡಾ ಸಿಕ್ಕಿದೆ ಇದನ್ನು ಜಾರಿಗೆ ತರಬೇಕು ಈ ಒಂದು ಕಡತಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿಸುವಂತೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸರ್ವ ಸದಸ್ಯರು ಒತ್ತಾಯವನ್ನು ಮಾಡಿದರು

ಈ ಒಂದು ಕಾರಣಕ್ಕಾಗಿ ಇಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದರು.ಇದೇ ವೇಳೆ ಸಂಘದ ಪರವಾಗಿ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು

ರಾಜ್ಯ ಉಪಾಧ್ಯಕ್ಷರಾದ ಗಿರೀಶ ನಾಯಕ, ಬೆಳಗಾವಿ ವಿಭಾಗದ ಉಪಾಧ್ಯಕ್ಷರಾದ ಎಚ್ ಎಂ ರಾಂಪೂರ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ನೀಲಾ ನಾಯಕ ಪ್ರಕಾಶ ಕಂಬಳಿ,ಪಾಂಡುರಂಗ ಅಂಕಲಿ, ಪಿ ವಾಯ್ ಹೊಸಮನಿ,ವೆಂಕಟೇಶ ಪಾಟೀಲ,ರಾಜೇಶ ಕೊಣ್ಣೂರ ಅವರೆಲ್ಲ ಸೇರಿ ಹಾಗೂ ಹಿರಿಯರಾದ ಶ್ರಿಮತಿ ಅನ್ನಪೂರ್ಣ ಅವರ ಸಹಕಾರದಿಂದ ಭೇಟಿ ಮಾಡಿದಾಗ

ಅಂತಿಮ ಹಂತದಲ್ಲಿರುವ,ಸಿ ಆಂಡ್ ಆರ್ ಹಾಗೂ ಸಿ ಆಂಡ್ ಆರ್ ಆಗುವವರೆಗೂ ಪ್ರಭಾರ ಹಾಗೂ ಹಾಜರಾತಿಗೆ ಸಂಬಂಧಿಸಿದಂತೆ ಸೇವಾ ಜೇಷ್ಠತೆ ಯನ್ನು ಪರಿಗಣಿಸಿ ನಮ್ಮನ್ನೂ ಸಹ ಶಿಕ್ಷಕರಂತೆ ಕಾಣಿಸುವ ಬಗ್ಗೆ ಸಮಗ್ರವಾಗಿ ಸಂಬಂಧಪಟ್ಟ ಅಧಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಗೊಳಿಸುವ ಭರವಸೆ ನೀಡಿದರು.ಇದೇ ವೇಳೆ ಸಮಗ್ರ ದೈಹಿಕ ಶಿಕ್ಷಣ ಶಿಕ್ಷಕರ ಪರವಾಗಿ ಮಾನ್ಯ ಸಭಾಪತಿಗಳಿಗೆ ಅಭಿನಂದಿಸಲಾಯಿತು.