ಧಾರವಾಡ –
ರಾಜಕಾರಣಿಗಳು ಕೇವಲ ರಾಜಕಾರಣವನ್ನು ಮಾಡದೇ ಅದರೊಂದಿಗೆ ಸಾಮಾಜಿಕ ಬದ್ದತೆ ಕಾಳಜಿ ಇರಬೇಕು ಎಂಬೊದನ್ನು ಧಾರವಾಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೋರಿಸಿಕೊಟ್ಟಿದ್ದಾರೆ ಹೌದು ಈ ಒಂದು ಮಾತಿಗೆ ಸಧ್ಯ ಪರೀಕ್ಷೆ ಬರೆಯಲು ಸಿದ್ದವಾಗಿರುವ SSLC ವಿದ್ಯಾರ್ಥಿ ಗಳ ವಿಚಾರದಲ್ಲಿ
ಮಹಾಮಾರಿ ಕರೋನದ ನಡುವೆಯೂ ಕೂಡಾ ಸಧ್ಯ SSLC ಪರೀಕ್ಷೆ ಬರೆಯಲು ರಾಜ್ಯದಲ್ಲಿ ವಿದ್ಯಾರ್ಥಿಗಳು ಸಿದ್ದರಾಗಿದ್ದಾರೆ.ಇತ್ತ ಧಾರವಾಡ ಜಿಲ್ಲೆಯಲ್ಲೂ ಪರೀಕ್ಷೆ ಬರೆಯಲುವಿದ್ಯಾರ್ಥಿ ಗಳು ಸಿದ್ದರಾಗಿದ್ದರೆ ಇಲಾಖೆ ಕೂಡಾ ಎಲ್ಲಾ ಸಿದ್ದತೆ ಗಳೊಂದಿಗೆ ಸಿದ್ದವಾಗಿದ್ದು ಇದರ ನಡುವೆ ಲೋಕಸಭಾ ಕ್ಷೇತ್ರದ ನನ್ನ ಪ್ರೀತಿಯ ವಿದ್ಯಾರ್ಥಿಗಳೇ ಭಯಮುಕ್ತರಾಗಿ ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆಯಿರಿ ಎನ್ನುತ್ತಾ ಕೇಂದ್ರ ಸಚಿವರ ಪ್ರಹ್ಲಾದ್ ಜೋಶಿ ನೆರವಾಗಿದ್ದಾರೆ
ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ SSLC ಶಾಲಾ ಮಕ್ಕಳು ಕೊರೋನಾ ಸೋಂಕಿನ ಭಯವಿಲ್ಲದೆ ಸುರಕ್ಷಿತವಾಗಿ ಮತ್ತು ಸುವ್ಯವಸ್ಥಿತ ವಾಗಿ ಪರೀಕ್ಷೆಯನ್ನು ಬರೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ 30000 ಶಾಲಾ ಮಕ್ಕಳಿಗೆ ಮತ್ತು ಪರೀಕ್ಷೆ ಸಿಬ್ಬಂದಿಗೆ N95 ಫೇಸ್ ಮಾಸ್ಕ, ಹ್ಯಾಂಡ್ ಸ್ಯಾನಿಟೈಸರ್, 500 ಥರ್ಮಲ್ ಸ್ಕ್ಯಾನರ್ ಮತ್ತು 500 ಪಲ್ಸ್ ಒಕ್ಸಿಮೀಟರ್ ಗಳನ್ನು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಪೋಷಕತ್ವದ ಕ್ಷಮತಾ ಸೇವಾ ಸಂಸ್ಥೆ ಮುಖಾಂತರ ಧಾರವಾಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಕಳೆದ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ PUC ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯ ಜಿಲ್ಲೆಯ 21,224 ವಿದ್ಯಾರ್ಥಿಗಳಿಗೆ ಮತ್ತು SSLC ಪರೀಕ್ಷೆ ವಿದ್ಯಾರ್ಥಿಗಳಿಗೆ 30000 ಮುಖಗವಸು (ಮಾಸ್ಕ್), ಸ್ಯಾನಿಟೈಸರ್ ಮತ್ತು 38 ಪರೀಕ್ಷಾ ಕೇಂದ್ರಗಳಿಗೆ 180 ಥರ್ಮಲ್ ಸ್ಕ್ಯಾನರ್ ಗಳನ್ನು ಕ್ಷಮತಾ ಸೇವಾ ಸಂಸ್ಥೆ ಮುಖಾಂತರ ವಿತರಿಸಿದ್ದರು ಈಗ ಮತ್ತೆ ಇಷ್ಟೊಂದು ವಸ್ತುಗಳನ್ನು ನೀಡಿದ್ದಾರೆ.ಓದಿನ ಕಡೆ ಗಮನಕೊಟ್ಟು ನೀವೆಲ್ಲಾ ಚೆನ್ನಾಗಿ ಓದಿ ಪರೀಕ್ಷೆ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಜಿಲ್ಲೆ ಶಾಲೆ ಮತ್ತು ಪಾಲಕರ ಕೀರ್ತಿ ಹೆಚ್ಚಿಸಿ ಉಜ್ವಲ ಭವಿಷ್ಯ ಪಡೆಯರಿ…. Wish you all the very best….ಎಂಬ ಸಂದೇಶ ದೊಂದಿಗೆ ಒಳ್ಳೆಯ ಕೆಲಸ ಮಾಡಿ ಆದರ್ಶತೆಯನ್ನು ಮೆರೆದಿದ್ದಾರೆ