ಹುಬ್ಬಳ್ಳಿ –
ಮಾಜಿ ಸಚಿವ ವಿನಯ ಕುಲಕರ್ಣಿ ಇಂದು ಬಿಡುಗಡೆಯಾಗಲಿದ್ದಾರೆ.ಜಾಮೀನು ಸಿಕ್ಕರು ಕೂಡಾ ಆ ಒಂದು ಪ್ರತಿ ಬಾರದ ಹಿನ್ನೆಲೆಯಲ್ಲಿ ಬೆಳಗಾವಿ ಯ ಹಿಂಡಲಗಾ ಜೈಲಿನಲ್ಲಿದ್ದ ಅವರು ಇಂದು ಬೆಳಿಗ್ಗೆ ಬಿಡುಗಡೆಯಾಗಲಿದ್ದಾರೆ.ಹನ್ನೊಂದು ಗಂಟೆಗೆ ಹೊರಗೆ ಅವರು ಬರಲಿದ್ದಾರೆ.
ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿನಯ ಕುಲಕರ್ಣಿ ಅವರು ಕಳೆದ ಒಂಬತ್ತು ತಿಂಗಳಿನಿಂದ ಬೆಳಗಾವಿ ಯ ಹಿಂಡಲಗಾ ಕಾರಾಗೃಹದಲ್ಲಿದ್ದಾರೆ.ಮೊನ್ನೆ ಅಷ್ಟೇ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.ಜಾಮೀನು ಸಿಕ್ಕರು ಜಾಮೀನು ಪ್ರತಿ ಬಾರದ ಹಿನ್ನೆಲೆಯಲ್ಲಿ ಬಿಡುಗಡೆ ಯಾಗಿರಲಿಲ್ಲ. ಬೆಳಿಗ್ಗೆ ಜಾಮೀನು ಪ್ರತಿ ಬಂದ ಕೂಡಲೇ ಹನ್ನೊಂದು ಗಂಟೆಗೆ ಬಿಡುಗಡೆ ಆಗಲಿ ದ್ದಾರೆ.
ಹಿಂಡಲಗಾ ಕಾರಾಗೃಹದಿಂದ ಬಿಡುಗಡೆ ಆಗಲಿದ್ದು ಅವರನ್ನು ಬರಮಾಡಿಕೊಳ್ಳಲು ಧಾರವಾಡ ದಿಂದ ಸಾಕಷ್ಟು ಪ್ರಮಾಣದಲ್ಲಿ ಕೈ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಆಪ್ತರು ಕುಟುಂಬದವರು ತೆರಳಲಿ ದ್ದಾರೆ.ಇನ್ನೂ ಪ್ರಮುಖವಾಗಿ ಬಿಡುಗಡೆಯಾದರೂ ಧಾರವಾಡ ಜಿಲ್ಲೆಗೆ ಬಾರದಂತೆ ನ್ಯಾಯಾಲಯ ಸೂಚನೆ ನೀಡಿದೆ.
ಬಿಡುಗಡೆ ನಂತರ ಬೆಂಗಳೂರು ಇಲ್ಲವೇ ಸವದತ್ತಿ ಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಕುಟುಂಬದವರು ಮಾಡಿದ್ದಾರೆ.ಒಂಬತ್ತು ತಿಂಗಳ ನಂತರ ಹೊರಗೆ ಬರುತ್ತಿದ್ದು ಬರಮಾಡಿಕೊಳ್ಳಲು ಧಾರವಾಡದಿಂದ ಸಾವಿರಕ್ಕೂ ಹೆಚ್ಚು ಕೈ ಪಕ್ಷದ ಕಾರ್ಯಕರ್ತರು ಮುಖಂಡರು ಬೆಳಗಾವಿ ಗೆ ತೆರಳುತ್ತಿದ್ದಾರೆ.
ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ದರಾದ ಕೈ ಪಡೆಯು ವಿಜಯೋತ್ಸವ ಮಾಡಲಿದ್ದಾರೆ. ಮಾಧ್ಯಮ ವಕ್ತಾರ ಆನಂದ್ ಸಿಂಗನಾಥ್ ಮಾಹಿತಿ ನೀಡಿದ್ದಾರೆ.