ಧಾರವಾಡ –
ನಾಳೆ ಐದು ದಿನಗಳ ಗಣಪತಿ ವಿಸರ್ಜನೆ ಕಾರ್ಯ ನಡೆಯಲಿದೆ. ವಿಸರ್ಜನೆ ಗಾಗಿ ಧಾರವಾಡ ದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗಬಾ ರದು ಎಂಬ ಕಾರಣಕ್ಕಾಗಿ ಧಾರವಾಡ ದಲ್ಲಿ ರೋಟರಿ ಕ್ಲಬ್ ನಿಂದ ಕೃತಕ ಬಾವಿಗಳ ನಿರ್ಮಾಣ ವನ್ನು ಮಾಡಲಾಗಿದೆ
ಹೌದು ರೋಟರಿ ಕ್ಲಬ್ ಧಾರವಾಡ ವತಿಯಿಂದ ಪರಿಸರ ಸ್ನೇಹಿ ಗಣಪತಿ ವಿಸಜ೯ನೆಗೆ ಕೃತಕ ಬಾವಿ ಸೌಲಭ್ಯ ಒದಗಿಸಲಾಗಿದೆ.ಪರಿಸರ ಮತ್ತು ಜಲಮೂ ಲಗಳ ರಕ್ಷಣೆ ಹಾಗೂ ಕೆರೆ,ಬಾವಿಗಳ ನೀರು ಮಲೀನಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣೇಶ ಮೂತಿ೯ಗಳ ವಿಸಜ೯ನೆಗಾಗಿ ದಿನಾಂಕ 14/09/2021ರಂದು ಮಂಗಳವಾರ ಟ್ರಕ್ ನಲ್ಲಿ ಪರಿಸರ ಸ್ನೇಹಿ ನೀರಿನ ಟ್ಯಾಂಕ್ ವ್ಯವಸ್ಥೆಯನ್ನು ಕನಾ೯ಟಕ ಕಾಲೇಜ ಗಣಪತಿ ಗುಡಿಯ ಹತ್ತಿರ ಸಂಜೆ 6.00 ರಿಂದ ರಾತ್ರಿ 10.00 ರವರೆಗೆ ಒದಗಿಸಲಾಗಿದೆ.
ಮೂತಿ೯ ವಿಸಜ೯ನೆ ಉಚಿತವಾಗಿದ್ದು ಧಾರವಾಡ ಶಹರದ ಶ್ರೀನಗರ, ಸಪ್ತಾಪುರ, ಚನ್ನಬಸವೇಶ್ವರ ನಗರ, ಶಿವಗಿರಿ,ಶ್ರೀಪಾದ ನಗರ, ರಾಣಿಚನ್ನಮ್ಮ ನಗರ,ಭಾರತಿ ನಗರ, ಆಕಾಶವಾಣಿ,ಕಾಲೇಜ ರಸ್ತೆಯ ಸುತ್ತಮುತ್ತಲಿನ ಭಕ್ತಾದಿಗಳು ಇದರ ಸದುಪಯೋಗ ಪಡಿಸಿಕೊಂಡು ಪರಿಸರ ರಕ್ಷಣೆಯ ಕಾಯ೯ದಲ್ಲಿ ಕೈಜೋಡಿಸಲು ಧಾರವಾಡ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯಕುಮಾರ ಕಟ್ಟೀಮನಿ, ಕಾಯ೯ದಶಿ೯ ಲಕ್ಷ್ಮೀಕಾಂತ ನಾಯಕ ಹಾಗೂ ಕೋಶಾಧ್ಯಕ್ಷರು ಮತ್ತು ಕಾಯ೯ಕ್ರಮ ಸಂಯೋಜಕ ರಾದ ಅಶೋಕ ನಾಗಸಮುದ್ರರವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೋ. ಲಕ್ಷ್ಮೀಕಾಂತ ನಾಯಕ್ ಮೊ. ನಂ 9448248277 ರೋ.ಅಶೋಕ ನಾಗಸಮುದ್ರ ಮೊ. ನಂ. 9480133774 ಸಂಪಕಿ೯ಸಲು ಕೋರಲಾಗಿದೆ.