ಧಾರವಾಡ –
ರೈತರಿಂದ ಬೆಂಬಲ ಬೆಲೆಗೆ ಕಡಲೆ ಖರೀದಿ ಮಾಡಿ, ಅದನ್ನ ವಿಲೇವಾರಿ ಮಾಡದೇ ಹಾಳಾಗುವುದಕ್ಕೆ ಕಾರಣವಾದ ಅಧಿಕಾರಿಗಳನ್ನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತರಾಟೆಗೆ ತೆಗೆದುಕೊಂಡರು.
ರಾಯಾಪುರದ ಬಳಿಯಿರುವ ಸರಕಾರಿ ಉಗ್ರಾಣಕ್ಕೆ ದಿಢೀರನೇ ಭೇಟಿ ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪರಿಸ್ಥಿತಿಯನ್ನ ಅವಲೋಕನ ಮಾಡಿದರು.
ಕಳೆದ 2019-20ರಲ್ಲಿ ರೈತರಿಂದ ನ್ಯಾಷನಲ್ ಅಗ್ರಿಕಲ್ಚರ ಮಾರ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಸುಮಾರು 3176 ಮೆಟ್ರಿಕ್ ಟನ್ ಕಡಲೆಯನ್ನ ಖರೀದಿ ಮಾಡಿತ್ತು. ಮೂರು ತಿಂಗಳಲ್ಲಿ ಅವುಗಳನ್ನ ಟೆಂಡರ್ ಮೂಲಕ ಮಾರಾಟ ಮಾಡಿ,ಇಲ್ಲಿಂದ ಸಾಗಿಸಬೇಕಾಗಿತ್ತು.ಆದರೆ, 18ತಿಂಗಳಾದರೂ ಅವುಗಳನ್ನ ವಿಲೇವಾರಿ ಮಾಡದೇ ಇರುವ ಕುರಿತು ಸುದ್ದಿ ಸಂತೆ ವರದಿಯನ್ನು ಪ್ರಸಾರ ಮಾಡಿತ್ತು ಹಾಗೆ ಈ ಒಂದು ವಿಚಾರವು ಸಚಿವರ ಗಮನಕ್ಕೆ ಬಂದಿತು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಖಾರವಾಗಿಯೇ ಮಾತನಾಡಿದ ಸಚಿವರು ಇಷ್ಟೊಂದು ಮಟ್ಟದಲ್ಲಿ ಕಡಲೆ ಹಾಳಾದರೇ ಯಾರೂ ಜವಾಬ್ದಾರಿ.ಇದಕ್ಕೆ ತಕ್ಷಣ ಕ್ರಮವನ್ನ ಜರುಗಿಸ ಬೇಕು.ಇಲ್ಲದಿದ್ದರೇ,ಸಂಬಂಧಿಸದವರ ಮೇಲೆ ಕಠಿಣ ಕ್ರಮವನ್ನ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.ಗದಗನಲ್ಲಿ 10062 ಮೆಟ್ರಿಕ್ ಟನ್ ಹಾಗೂ ಬೈಲಹೊಂಗಲ 4880 ಮೆಟ್ರಿಕ್ ಟನ್ ಉಗ್ರಾಣದಲ್ಲಿ ರುವುದು ಗೊತ್ತಾಗಿದೆ.ಅಲ್ಲಿನ ಅಧಿಕಾರಿಗಳಿಗೂ ಈಗಾಗಲೇ ಕಟ್ಟುನಿಟ್ಟಿನ ಸೂಚನೆಯನ್ನ ನೀಡಿದ್ದು, ಸರಿಯಾಗದೇ ಹೋದಲ್ಲಿ ಶಿಸ್ತುಕ್ರಮವನ್ನ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.ನಾಫೇಡ್ ಹಾಗೂ ರಾಜ್ಯ ಉಗ್ರಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.