ಹುಬ್ಬಳ್ಳಿ ಧಾರವಾಡ ಪಾಲಿಕೆಯ ಆಯುಕ್ತರಾಗಿ ರುದ್ರೇಶ ಘಾಳಿ – ಡಾ ಈಶ್ವರ ಉಳ್ಳಾಗಡ್ಡಿಯವರಿಗೆ ಬೆಳಗಾವಿ ನಗರಾಭಿವೃದ್ದಿಗೆ ವರ್ಗಾವಣೆ…..

Suddi Sante Desk
ಹುಬ್ಬಳ್ಳಿ ಧಾರವಾಡ ಪಾಲಿಕೆಯ ಆಯುಕ್ತರಾಗಿ ರುದ್ರೇಶ ಘಾಳಿ – ಡಾ ಈಶ್ವರ ಉಳ್ಳಾಗಡ್ಡಿಯವರಿಗೆ ಬೆಳಗಾವಿ ನಗರಾಭಿವೃದ್ದಿಗೆ ವರ್ಗಾವಣೆ…..

ಬೆಂಗಳೂರು

ಹುಬ್ಬಳ್ಳಿ ಧಾರವಾಡ ಪಾಲಿಕೆಯ ಆಯುಕ್ತರಾಗಿ ರುದ್ರೇಶ ಘಾಳಿ – ಡಾ ಈಶ್ವರ ಉಳ್ಳಾಗಡ್ಡಿಯವರಿಗೆ ಬೆಳಗಾವಿ ನಗರಾಭಿವೃದ್ದಿಗೆ ವರ್ಗಾವಣೆ ಹೌದು

ಕಳೆದ ಒಂದೂವರೆ ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರನ್ನು ವರ್ಗಾವಣೆ ಮಾಡಲಾಗಿದೆ.ಪಾಲಿಕೆಗೆ ಆಯುಕ್ತರಾಗಿ ಬಂದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಜನಸ್ನೇಹಿ ಆಡಳಿತದೊಂದಿಗೆ ಅಧಿಕಾರಿ ಯಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರನ್ನು ರಾಜ್ಯ ಸರ್ಕಾರ ಬೆಳಗಾವಿ ನಗರಾಭಿವೃದ್ದಿಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.

 

ತೆರಿಗೆ ಸಂಗ್ರಹ,ಅಭಿವೃದ್ದಿ ಕೆಲಸ ಕಾರ್ಯಗಳು,ಹೊಸ ಹೊಸ ಯೋಜನೆಗಳು ಸೇರಿದಂತೆ ಹತ್ತಾರು ಕೆಲಸ ಕಾರ್ಯಗಳ ಮೂಲಕ ಜನಸ್ನೇಹಿ ಆಡಳಿತವನ್ನು ನೀಡಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರನ್ನು ರಾಜ್ಯ ಸರ್ಕಾರ ಬೆಳಗಾವಿಯ ನಗರಾಭಿವೃದ್ದಿಗೆ ವರ್ಗಾವಣೆ ಮಾಡಿದೆ.

ಪಾಲಿಕೆಯ ಸದಸ್ಯರು, ಸಾರ್ವಜನಿಕರು, ಅಧಿಕಾರಿಗಳು ಹೀಗೆ ಯಾರೇ ಬಂದರು ತಾವೇ ಸಂಬಂಧಿಸಿದವರಿಗೆ ಪೊನ್ ಕರೆ ಮಾಡಿ ಸಮಸ್ಯೆ ಯನ್ನು ಪರಿಹಾರ ಮಾಡಿ ಸೂಚನೆಯನ್ನು ನೀಡಿ ಕಳಿಸಿಕೊಡುತ್ತಾ ಒಳ್ಳೇಯ ಜನಸ್ನೇಹಿ ಆಡಳಿತವನ್ನು ಪಾಲಿಕೆಯಲ್ಲಿ ಹುಟ್ಟು ಹಾಕಿದ್ದರು.

ಇನ್ನೂ ಸಧ್ಯ ಪಾಲಿಕೆಗೆ ನೂತನ ಆಯುಕ್ತರಾಗಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರುದ್ರೇಶ ಘಾಳಿ ಯವರನ್ನು ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.ಪಾಲಿಕೆಯ ಜವಾಬ್ದಾರಿ ಯನ್ನು ರಾಜ್ಯ ಸರ್ಕಾರ ರುದ್ರೇಶ ಘಾಳಿಯವರಿಗೆ ನೀಡಿ ಆದೇಶವನ್ನು ಮಾಡಿದ್ದು

ಇತ್ತ ಜನಸ್ನೇಹಿ ಆಡಳಿತದೊಂದಿಗೆ ಎಲ್ಲರಿಗೂ ಹತ್ತಿರದಿಂದ ಪ್ರತಿದಿನ ಪ್ರತಿಕ್ಷಣ ಸಿಗುತ್ತಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರ ವರ್ಗಾವಣೆಯಿಂದಾಗಿ ಅಧಿಕಾರಿ ಗಳು ಸಾರ್ವಜನಿಕರು ಸೇರಿದಂತೆ ಹಲವರು ಬೇಸರ ಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.