ಬೆಂಗಳೂರು –
ನಾಳೆಯಿಂದ ಡಿಸೆಂಬರ್ 2 ರವರೆಗೆ ನಡೆಯಲಿರುವ ಸರ್ಕಾರಿ ಪ್ರೌಢ ಶಾಲೆಯ ಸಾಮಾನ್ಯ ಶಿಕ್ಷಕರ ವರ್ಗಾವ ಣೆಯ ಕೌನ್ಸಲಿಂಗ್ ನ್ನು ಮುಂದೂಡಲಾಗಿದೆ.ಹೌದು ನಾಳೆ ಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಯ ಶಿಕ್ಷಕರ ವರ್ಗಾವಣೆಯನ್ನು ಮೊದಲು ಮಾಡಲು ಉದ್ದೇಶವನ್ನು ಮಾಡಲಾಗಿತ್ತು ಆದರೆ ಏಕ ಕಾಲದಲ್ಲಿ ಎರಡು ವರ್ಗಾವಣೆ ಯನ್ನು ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರವನ್ನು ಕೈಗೊಂಡಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಯ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯಬೇಕಾದ ಕೌನ್ಸಲಿಂಗ್ ನ್ನು ಮುಂದೂಡಿಕೆ ಮಾಡಲಾಗಿದೆ
ಒಂದು ಕಡೆ ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ಮತ್ತೊಂದು ಕಡೆ ಪ್ರೌಢ ಶಾಲೆಯ ಶಿಕ್ಷಕರ ವರ್ಗಾವಣೆ ಏಕ ಕಾಲದಲ್ಲಿ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಗುಲಬರ್ಗಾ ಮತ್ತು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಆದೇಶದಂತೆ ಮುಂದೂಡಿಕೆ ಮಾಡಲಾಗಿದೆ
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಒಂದು ತೀರ್ಮಾನವನ್ನು ತಗೆದುಕೊಂಡು ಆದೇಶವನ್ನು ಮಾಡಲಾಗಿದೆ ಇನ್ನೂ ಮುಂದಿನ ಅಂದರೆ ಕೌನ್ಸಲಿಂಗ್ ದಿನಾಂಕ ವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮುಗಿದ ನಂತರ ಮಾಡಲಾಗುವುದು ಎಂಬ ಮಾತನ್ನು ಹೇಳಿದ್ದು ಏನಾಗಲಿದೆ ಎಂಬೊಂದನ್ನು ಕಾದು ನೋಡಬೇಕು