ಬೆಂಗಳೂರು –
ತಾಂತ್ರಿಕ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಶಿಕ್ಷಕರ ವರ್ಗಾವಣೆ ಸೋಮವಾರದಿಂದ ಮತ್ತೆ ಆರಂಭವಾಗಲಿದೆ. ಹೌದು ನವಂಬರ್ 24 ರಿಂದ ನಡೆಯಬೇಕಾಗಿದ್ದ ಪ್ರಾಥ ಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಈ ಒಂದು ವರ್ಗಾವಣೆ ಯನ್ನು ಮಂಜೂರಾದ ಹುದ್ದೆಗಳ ಮೇಲೆ ಮಾಡುವಂತೆ ಸೂಚನೆ ನೀಡಿ ಮುಂದೂಡಲಾಗಿತ್ತು
ಸಧ್ಯ ಮತ್ತೆ ಎಲ್ಲಾ ಸಿದ್ದತೆಗಳು ಮುಕ್ತಾಯಗೊಂಡ ಹಿನ್ನಲೆ ಯಲ್ಲಿ ಈ ಒಂದು ವರ್ಗಾವಣೆಯ ಪ್ರಕ್ರಿಯೆ ಮತ್ತೆ ಸೋಮವಾರದಿಂದ ಆರಂಭವಾಗಲಿದ್ದು ನಾಳೆ ನೂತನ ಹೊಸ ವರ್ಗಾವಣೆಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ತಿಳಿಸಿದ್ದಾರೆ
ನಂತರ ವರ್ಗಾವಣೆ ನಡೆಯಲಿದ್ದು ಇದರಲ್ಲಾದರೂ ನೊಂದುಕೊಂಡಿರುವ ಶಿಕ್ಷಕರಿಗೆ ಅನುಕೂಲವಾಗುತ್ತದೆನಾ ಎಂಬುದನ್ನು ಕಾದು ನೋಡಬೇಕು