ಪಿಥೋರಗಢ –
ಪರಿಶಿಷ್ಟ ಜಾತಿಗೆ ಸೇರಿದ ಮಧ್ಯಾಹ್ನದ ಬಿಸಿಯೂಟ ತಯಾರಕಿಯೊಬ್ಬರನ್ನು ಕೆಲಸದಿಂದ ತೆಗೆದು ಹಾಕಿ ಮೇಲ್ಜಾ ತಿಗೆ ಸೇರಿದ ಅಡುಗೆ ತಯಾರಕಿಯನ್ನು ನೇಮಿಸಿದ್ದಕ್ಕೆ ಪ್ರತಿರೋಧ ತೋರಿರುವ ದಲಿತ ವಿದ್ಯಾರ್ಥಿಗಳು ಊಟ ವನ್ನು ತ್ಯಜಿಸಿದ್ದಾರೆ.ಹೌದು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸರ್ಕಾರಿ ಇಂಟರ್-ಕಾಲೇಜಿನಲ್ಲಿ ಬಿಸಿಯೂಟದ ವಿಚಾರವಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಊಟ ನಿರಾಕರಣೆಯ ಹೋರಾಟ ನಡೆದಿದೆ.ಈ ಮೊದಲು ಮಧ್ಯಾಹ್ನದ ಬಿಸಿಯೂಟ ತಯಾ ರಕಿಯಾಗಿ ಸುಖಿ ದಂಗ್ ಎಂಬ ಮಹಿಳೆ ಕೆಲಸ ಮಾಡುತ್ತಿ ದ್ದರು.ಇವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ 6-8ನೇ ತರಗತಿ ವರೆಗಿನ 43 ವಿದ್ಯಾರ್ಥಿಗಳು ಬಿಸಿಯೂಟ ನಿರಾಕರಿಸಿದ್ದರು.ಬಳಿಕ ಸುಖಿ ದಂಗ್ ಅವರ ನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಬಿಸಿಯೂಟ ತಯಾರಕಿಯ ನೇಮಕ ಪ್ರಕ್ರಿಯೆಯಲ್ಲಿನ ಲೋಪಗಳ ಕಾರಣ ಕೊಟ್ಟು ಚಂಪಾವತ್ ಶಿಕ್ಷಣ ಇಲಾಖೆ ಯ ಅಧಿಕಾರಿಗಳು ಸುಖಿ ದಂಗ್ ಅವರನ್ನು ಶಾಲೆಯಿಂದ ಹೊರದಬ್ಬಿದ್ದಾರೆ. ಆಕೆಯ ಸ್ಥಾನಕ್ಕೆ ಮೇಲ್ಜಾತಿಗೆ ಸೇರಿದ ಮಹಿಳೆಯನ್ನು ನೇಮಿಸಲಾಗಿದೆ. ಇದೀಗ ಹೊಸ ಬಿಸಿ ಯೂಟ ತಯಾರಕಿ ಮಾಡಿದ ಊಟವನ್ನು ಸೇವಿಸಲು 23 ದಲಿತ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.ಈ ವಿಚಾರವಾಗಿ ತನಿಖೆಯನ್ನು ಮಾಡಲಾಗುತ್ತಿದ್ದು ಸಧ್ಯ ಎರಡೂ ಸಮುದಾ ಯದ ಸದಸ್ಯರೊಂದಿಗೆ ಮಾತುಕತೆ ನಡೆದಿದ್ದು ಸಮಸ್ಯೆ ಯನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು