ಧಾರವಾಡ –
ಧಾರವಾಡ ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯ ಅಧಿಕಾರಿ ಯಾಗಿ ಡಾ.ಬಸನಗೌಡ ಚಂದ್ರಗೌಡ ಕರಿಗೌಡರ್ ಅಧಿಕಾರ ವಹಿಸಿಕೊಂಡರು.ಡಾ.ಬಸನಗೌಡ ಚಂದ್ರಗೌಡ ಕರಿಗೌ ಡರ್ ಅವರು ಗದಗ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಸೇವೆ ಸಲ್ಲಿಸಿ ಈಗ ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಹಿಂದಿನ ಡಿಎಚ್‍ಓ ಡಾ.ಯಶವಂತ ಮದೀನಕರ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯು ಕ್ತರ ಕಚೇರಿಗೆ ಸ್ಥಳ ನಿಯುಕ್ತಿಗಾಗಿ ವರದಿ ಮಾಡಿಕೊಂಡಿ ದ್ದಾರೆ.