ಬೆಂಗಳೂರು –
ಜನವರಿ 18 ರಿಂದ ಆರಂಭಗೊಳ್ಳಬೇಕಿದ್ದಂತ ಶಿಕ್ಷಕರ ವರ್ಗಾವಣೆಯನ್ನು ತಾಂತ್ರಿಕ ಕಾರಣದಿಂದಾಗಿ ರದ್ದು ಪಡಿಸಲಾಗಿತ್ತು.ಸಧ್ಯ ಈ ಒಂದು ಪ್ರಕ್ರಿಯೆಯನ್ನು ಮತ್ತೆ ಇದೀಗ ಆರಂಭ ಮಾಡಲಾಗುತ್ತಿದೆ ಮುಂದೂಡಿಕೆಯಾಗಿ ದ್ದ ಈ ಒಂದು ಶಿಕ್ಷಕರ ವರ್ಗಾವಣೆಯನ್ನು ಮತ್ತೆ ಆರಂಭ ಮಾಡಲಾಗುತ್ತಿದ್ದು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಫೆಬ್ರವರಿ 14, 2022ರಿಂದ ಮತ್ತೆ ಪುನರಾರಂಭಗೊಳ್ಳು ತ್ತಿದೆ.
ಹೌದು ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು,ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯನ್ನು ಮುಂದುವರೆಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಫೆಬ್ರವರಿ 14,2022 ರಿಂದ ಅಂತಿಮ ಆದ್ಯತಾ ಪಟ್ಟಿಯಂತೆ ಕೋರಿಕೆ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳನಿಯುಕ್ತಿಗೊಳಿಸೋ ಪ್ರಕ್ರಿಯೆ ಆರಂಭ ಗೊಂಡು ದಿನಾಂಕ 28-02-2022ರವರೆಗೆ ನಡೆದು ಮುಕ್ತಾಯಗೊಳ್ಳಲಿದೆ