ಧಾರವಾಡ –
73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಧಾರವಾಡ ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಗಳ ಕಚೇರಿಯಲ್ಲೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಹೌದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಬಸನಗೌಡ ಚಂದ್ರಗೌಡ ಕರಿಗೌಡರ ಧ್ವಜಾರೋಹಣ ನೆರವೇರಿಸಿದರು.ಕಚೇರಿಯ ಮುಂಭಾಗ ದಲ್ಲಿ ಧ್ವಜಾರೋಹಣವನ್ನು ಮಾಡಿ ನಂತರ ಸಂವಿಧಾನದ ರಚಿಸಿದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ ಇವರ ಸಮಗ್ರವಾದ ಮಾಹಿತಿಯನ್ನು ಎಲ್ಲ ಸಿಬ್ಬಂದಿಗಳಿಗೆ ತಿಳಿಸಿದರು.
ಹಾಗೇ ಕಾರ್ಯಾಂಗ ನ್ಯಾಯಾಂಗ ಹಾಗೂ ಶಾಸಕಾಂಗದ ಕುರಿತು ಮಾತನಾಡಿದರು ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು,ತಾಲೂಕ ಆರೋಗ್ಯ ಅಧಿಕಾರಿಗಳು, ವೈದ್ಯಾದಿಕಾರಿಗಳು, ಹಾಗೂ ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿಗಳು ಬಾಗವಹಿಸಿ ದ್ದರು.ಇನ್ನೂ ಕಾರ್ಯಕ್ರಮವನ್ನು ಶ್ರೀಪಾದ ಕಮ್ಮಾರ ಪ್ರಥಮ ದರ್ಜೆ ಸಹಾಯಕ ನಿರೂಪಿಸಿದರು ನಂತರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊ ಳಿಸಲಾಯಿತು
ಕಾರ್ಯಕ್ರಮದಲ್ಲಿ ಡಾ ಎಸ್ ಎಮ್ ಹೊನಕೇರಿ,ಡಾ: ಅಯ್ಯನಗೌಡ ಪಾಟೀಲ,ಡಾ ಶ್ರೀಮತಿ ನಿಂಬಣ್ಣವರ,ಡಾ: ಶ್ರೀಮತಿ ತನುಜಾ ಕೆ ಎನ್.ಡಾ ಶ್ರೀಮತಿ,ಶಶಿ ಪಾಟೀಲ. ಡಾ: ಶ್ರೀಮತಿ,ಎಸ್ ವಿ ಹಸವೀಮಠ ಜಿಲ್ಲಾ ಎಲ್ಲಾ ಕಚೇರಿ ಗಳ ಸಮಸ್ತ ಸಿಬ್ಬಂದಿಗಳು ಭಾಗವಹಿಸಿ
ಸಮಾರಂಭಕ್ಕೆ ಮೆರಗನ್ನು ತಗೆದುಕೊಂಡು ಬಂದರು ಇದರೊಂದಿಗೆ ಕಚೇರಿ ಯಲ್ಲಿ 73ನೇ ಗಣರಾಜ್ಯೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು